ಮೈಸೂರು,ಫೆಬ್ರವರಿ,5,2021(www.justkannada.in): ದೆಹಲಿ ರೈತರ ಹೋರಾಟ ಬೆಂಬಲಿಸಿ ನಾಳೆ ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ರಿಂಗ್ ರೋಡ್ ಬಳಿ ರಸ್ತೆ ಬಂದ್ ಚಳುವಳಿ ಮಾಡಲಾಗುತ್ತದೆ. ಹಾಗೆಯೇ ಕುರಿ-ಮೇಕೆ ಎತ್ತಿನಗಾಡಿ, ಜೊತೆ ವಿಭಿನ್ನ ಚಳುವಳಿಯನ್ನ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದ ವತಿಯಿಂದ ಹಮ್ಮಿಕೊಳ್ಳಲಾಗಿದೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರಸರಕಾರ ಪೊಲೀಸ್ ಬಲದ ಮೂಲಕ ಸಾಕಷ್ಟು ಕಿರುಕುಳ ನೀಡುತ್ತಿದೆ, ಇದೆ ಸರ್ಕಾರ ಚಳವಳಿನಿರತ ರೈತರ ಜೊತೆ ಮಾತುಕತೆಗೆ ಸಿದ್ಧ ಎನ್ನುವ ಸಂದೇಶ ನೀಡುತ್ತಿದೆ, ಚಳುವಳಿ ನಡೆಯುತ್ತಿರುವ ಜಾಗದಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಿರುವುದು ರಸ್ತೆಗಳಿಗೆ ಮುಳ್ಳುತಂತಿ ಬೇಲಿ ಹಾಕಿರುವುದು, ಇಬ್ಬಗೆ ನೀತಿ ಆಗಿದೆ.
ಇದರ ವಿರುದ್ಧ ಶಾಂತಿಯುತ ಹೋರಾಟ ನಡೆಸಲು ರಾಷ್ಟ್ರ ಮಟ್ಟದ ಕಿಸಾನ್ ಸಂಯುಕ್ತ ಮೋರ್ಚಾ ಕರೆ ನೀಡಿದೆ. ಈ ಮೇರೆಗೆ ರಾಜ್ಯದಲ್ಲಿಯೂ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟದ ವತಿಯಿಂದ ನಾಳೆ 12ಗಂಟೆಯಿಂದ 2 ಗಂಟೆ ತನಕ ಮೈಸೂರಿನ ಬಂಡಿಪಾಳ್ಯ ರಿಂಗ್ ರಸ್ತೆ ವೃತ್ತದ ಬಳಿ ರಸ್ತೆ ಬಂದ್ ಚಳುವಳಿ ನಡೆಸುವ ಮೂಲಕ ದೇಶದ ರೈತರ ಹೋರಾಟವನ್ನು ಬೆಂಬಲಿಸಿಲಾಗುವುದು ಎಂದು ರೈತಮುಖಂಡ ಬರಡನಪುರ ನಾಗರಾಜ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಹತ್ತಳ್ಳಿ ದೇವರಾಜ್ ತಿಳಿಸಿದ್ದಾರೆ.
Key words: Support – Delhi protest-different movement – sheep-goat – Mysore- tomorrow.