ಹನಿಟ್ರ್ಯಾಪ್ ಕೇಸ್: PIL ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ,ಮಾರ್ಚ್,26,2025 (www.justkannada.in): ರಾಜ್ಯದಲ್ಲಿ ನಡೆದಿದೆ ಎನ್ನಲಾದ ಹನಿಟ್ರ್ಯಾಪ್ ವಿಚಾರ ದೇಶದಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಈ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ರಾಜಕಾರಣಿಗಳು ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆಗಿದೆ. ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಮನವಿ ಮಾಡಿ ಜಾರ್ಖಂಡ್ ರಾಜ್ಯದ ವಕೀಲ ವಿನಯ್ ಕುಮಾರ್ ಸಿಂಗ್ ಎಂಬುವವರು ಸುಪ್ರೀಂಕೋರ್ಟ್ ಪಿಐಎಲ್ ಸಲ್ಲಿಕೆ ಮಾಡಿದ್ದರು.

ಈ ಪಿಐಎಲ್ ವಜಾಗೊಳಿಸಿರುವ ಸುಪ್ರೀಂಕೋರ್ಟ್, ನೀವು ಜಾರ್ಖಂಡ್ ರಾಜ್ಯದವರು ನಿಮಗೇನು ಸಂಬಂಧ. ಜಡ್ಜ್ ಗಳು ಯಾಕೆ ಹನಿಟ್ರ್ಯಾಪ್ ಗೆ ಒಳಗಾಗುತ್ತಾರೆ. ಅದನ್ನ  ಜಡ್ಜ್‍ ಗಳು ನೋಡಿಕೊಳ್ಳುತ್ತಾರೆ. ನಿಮ್ಮ ರಾಜಕೀಯ ನಾನ್ ಸನ್ಸ್ ಗಳನ್ನೆಲ್ಲಾ ನಾವು ವಿಚಾರಣೆ ಮಾಡಲ್ಲ ಎಂದು ವಕೀಲ ವಿನಯ್ ಕುಮಾರ್ ಸಿಂಗ್ ರನ್ನು ತರಾಟೆ ತೆಗೆದುಕೊಂಡಿತು.

Key words: Honeytrap case,  Supreme Court, dismisses, PIL