ನವದೆಹಲಿ,ಅ,23,2019(www.justkannada.in): ಸ್ಪೀಕರ್ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಮಧ್ಯಾಹ್ನ 2 ಗಂಟೆಗೆ ಮುಂದೂಡಿದೆ.
ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ್ಯಾಯಾಧೀಶರು, ವಿಚಾರಣೆಗೆ ವಕೀಲ ಕಪಿಲ್ ಸಿಬಲ್ ಇರಬೇಕು ಎಂದರು. ಈ ವೇಳೆ ಜೆಡಿಎಸ್ ಪರ ವಕೀಲ ರಾಜೀವ್ ಧವನ್, ಕಪಿಲ್ ಸಿಬಲ್ ಬರುವುದು 2 ಗಂಟೆ ತಡವಾಗುತ್ತದೆ ಎಂದು ಮಾಹಿತಿ ನೀಡಿದರು. ಅಲ್ಲದೆ ತಮಗೆ ಪ್ರತ್ಯೇಕ ವಾದ ಮಂಡಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಆದರೆ ಇದಕ್ಕೆ ಒಪ್ಪದ ನ್ಯಾಯಮೂರ್ತಿ ರಮಣ ಅವರು, ವಾದ ಮಂಡನೆಗೆ ಹೆಚ್ಚು ಸಮಯ ನೀಡಲು ಆಗಲ್ಲ. ಒಂದೇ ಪ್ರಕರಣದ ಬಗ್ಗೆ ವಾರಗಟ್ಟಲೇ ವಾದ ಮಂಡನೆ ಮಾಡಲು ಆಗಲ್ಲ. ಇಂದೇ ವಾದ –ಪ್ರತಿವಾದ ಮುಗಿಸಬೇಕು. ಇಂದೇ ವಾದ ಮುಗಿಸಲು ಕಪಿಲ್ ಸಿಬಲ್ ಗೆ ಹೇಳಿ. ಹಾಗಯೇ ಎಲ್ಲಾ ಅನರ್ಹ ಶಾಸಕರ ಪರ ಒಟ್ಟಿಗೆ ವಾದ ಮಂಡಿಸಿ ಎಂದು ಸೂಚನೆ ನೀಡಿ ನೀಡಿ ವಿಚಾರಣೆಯನ್ನ ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.
Key words: Supreme Court -adjourned – hearing – disqualified legislators