ಬೆಂಗಳೂರು,ಜು,23,2019(www.justkannada.in): ಸಿಎಂಗೆ ವಿಶ್ವಾಸಮತಯಾಚಿಸಲು ನಿರ್ದೇಶನ ನೀಡುವಂತೆ ಕೋರಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ.
ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ಅವರ ಪೀಠ ನಾಳೆಗೆ ವಿಚಾರಣೆಯನ್ನು ಮುಂದೂಡಿದೆ. ಸುಪ್ರೀಂಕೋರ್ಟ್ ನಲ್ಲಿ ಸ್ಪೀಕರ್ ಪರ ಅಭಿಷೇಕ್ ಮನು ಸಿಂಘ್ವಿ , ಪಕ್ಷೇತರ ಶಾಸಕರ ಪರ ಮುಕುಲ್ ರೋಹ್ಟಗಿ ಹಾಗೂ ಸಿಎಂ ಪರ ರಾಜೀವ್ ಧವನ್ ವಾದ ಮಂಡನೆ ಮಾಡಿದರು.
ಸ್ಪೀಕರ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಯುತ್ತಿದೆ. ಚರ್ಚೆ ನಡೆಯುತ್ತಿದೆ. ಈ ಮಧ್ಯೆ ರಾಜ್ಯಪಾಲರು ನಿರ್ದೇಶನ ನೀಡುತ್ತಿದ್ದಾರೆ. ತರಾತುರಿಯಲ್ಲಿ ರಾಜ್ಯಪಾಲರು ನಿರ್ದೇಶನ ನೀಡುತ್ತಿರುವುದೇಕೆ…? ಈ ರೀತಿ ನಿರ್ದೇಶನ ನೀಡುವ ಹಾಗಿಲ್ಲ. ವಿಶ್ವಾಸಮತಯಾಚನೆ ಇಂದು ನಡೆಯಬಹುದು ನಾಳೆ ನಡೆಯಬಹುದು. ಅತೃಪ್ತ ಶಾಸಕರಿಗೆ ನೋಟೀಸ್ ನೀಡಿದ್ದಾರೆ ವಿಚಾರಣೆ ನಡೆಯಬೇಕಿದೆ ಎಂದು ಸ್ಪೀಕರ್ ನಡೆಯನ್ನ ಸಮರ್ಥಿಸಿಕೊಂಡರು.
ಹಾಗೆಯೇ ಇಂದೇ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯುತ್ತದೆ ಎಂದು ಅಭಿಷೇಕ್ ಮನು ಸಿಂಘ್ವಿ ಸುಪ್ರೀಂಕೋರ್ಟ್ ಗೆ ತಿಳಿಸಿದರು.
Key words: Supreme Court –adjourns- hearing –independet MLA-petition