ನವದೆಹಲಿ,ನ,4,2019(www.justkannada.in): ಅಪರೇಷನ್ ಕಮಲದ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದ್ದ ಆಡಿಯೋ ಇದೀಗ ಅನರ್ಹ ಶಾಸಕರಿಗೆ ಉರುಳಾಗುವ ಸಾಧ್ಯತೆ ಇದೆ. ಹೌದು ಸಿಎಂ ಬಿಎಸ್ ಯಡಿಯೂರಪ್ಪ ಆಡಿಯೋ ಬಗ್ಗೆ ಕಾಂಗ್ರೆಸ್ ಸುಪ್ರೀಂಕೋರ್ಟ್ ನಲ್ಲಿ ಪ್ರಸ್ತಾಪಿಸಿದೆ.
ಬಿಎಸ್ ಯಡಿಯೂರಪ್ಪ ಆಡಿಯೋ ವಿಚಾರವನ್ನ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟ್ ನ್ಯಾ. ರಮಣ ನೇತೃತ್ವದ ಪೀಠದಲ್ಲಿ ಪ್ರಸ್ತಾಪಿಸಿದ್ದಾರೆ. ಕೋರ್ಟ್ ತೀರ್ಪು ಕಾಯ್ದಿರಿಸಿದ ಬಳಿಕ ಕೆಲವು ಬೆಳವಣಿಗೆಗಳಾಗಿವೆ. ನಮ್ಮ ವಾದವನ್ನ ಪರಿಗಣಿಸಬೇಕು. ನಮಗೆ ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ರಮಣ ಅವರು, ಸಿಜೆಐ ಗಮನಕ್ಕೆ ತಂದು ಹೊಸ ಪೀಠ ರಚನೆಗೆ ಮನವಿ ಮಾಡುತ್ತೇವೆ. ಸಿಜೆಐ ಒಪ್ಪಿದರೇ ನಾಳೆಯೆ ಪ್ರತ್ಯೇಕ ಪೀಠದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ. ಆಡಿಯೋವನ್ನ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ನೀವು ಹಿರಿಯ ವಕೀಲರು ಎಲ್ಲಾ ವಾದ ಮಾಡಿದ್ದೀರಾ. ಇನ್ನೇನು ಬಾಕಿ ಇದೆ. ತೀರ್ಪು ಕಾಯ್ದಿರಿಸಲಾಗಿದೆ ಎಂದು ನ್ಯಾಯಮೂರ್ತಿ ರಮಣ ತಿಳಿಸಿದರು. ಇದು ಮಹತ್ವದ ವಿಷಯ ಇದನ್ನ ಪರಿಗಣಿಸಲೇಬೇಕು ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತೆ ಮನವಿ ಮಾಡಿದರು. ಒಕೆ ಹಾಗಾದರೇ ನಾಳೆ ವಿಚಾರಣೆಗೆ ಬೆಂಚ್ ಫಾರ್ಮ್ ಮಾಡುವಂತೆ ಸಿಜೆಐಗೆ ಮನವಿ ಮಾಡುತ್ತೇವೆ. ನಾಳೆ 5 ನಿಮಿಷಗಳ ಕಾಲ ವಿಚಾರಣೆ ನಡೆಯಲಿ ಎಂದು ನ್ಯಾ. ರಮಣ ಹೇಳಿದರು.
Key words: Supreme Court – Congress – CM BSY Audio – Operation kamala-considered – witness