ಸಕ್ಕರೆ ಕಾರ್ಖಾನೆ ಪುನರಾರಂಭಿಸಲು ಶಾಸಕ ಯತ್ನಾಳ್ ಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್

ನವದೆಹಲಿ,ಡಿಸೆಂಬರ್,20,2024 (www.justkannada.in):  ಕಲಬುರಗಿ ಜಿಲ್ಲೆಯ ಚಿಂಚೋಳಿಯ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಪುನರಾರಂಭಿಸಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಪ್ರೀಂಕೋರ್ಟ್ ಗೆ ಅನುಮತಿ  ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿಯ ಸಿದ್ದಸಿರಿ ಸಕ್ಕರೆ ಕಾರ್ಖಾನೆಯಲ್ಲಿ ಮುಂದಿನ ಏಳು ದಿನದ ಒಳಗಾಗಿ ಕಬ್ಬು ಅರೆಯುವ ಪ್ರಕ್ರಿಯೆಯನ್ನು ಆರಂಭಿಸಲು ಸೂಕ್ತ ಆದೇಶ ನೀಡುವಂತೆ ರಾಜ್ಯಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಶಾಸಕ ಯತ್ನಾಳ್,  ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪುಣ್ಯ ಪವಿತ್ರ ಸಮಾಧಿ ಸ್ಥಳ ಬೆಳಗಾವಿಯ ನಂದಗಡಕ್ಕೆ ಇಂದು ಭೇಟಿ ನೀಡಿ, ಭಕ್ತಿಪೂರ್ವಕ ನಮನ ಸಲ್ಲಿಸಿ, ಆಶೀರ್ವಾದ ಪಡೆದುಕೊಳ್ಳುವ ಸಮಯದಲ್ಲಿಯೇ, ನಮ್ಮ ಚಿಂಚೋಳಿ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕಕ್ಕೆ ಕಬ್ಬು ನುರಿಸಲು 7 ದಿನಗಳಲ್ಲಿ ಅನುಮತಿ ನೀಡಬೇಕೆಂದು ಮಾನ್ಯ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಶುಭ ಸುದ್ದಿ ಬಂದಿದ್ದು, ಸಂಗೊಳ್ಳಿ ರಾಯಣ್ಣನವರ ಪವಾಡ ಶಕ್ತಿಯ ಆಶೀರ್ವಾದವೇ ಸಾಕ್ಷಿಯಾಯಿತು.

ಹಾಲುಮತದ ಮಹತ್ವ, ಪವಾಡ ಶಕ್ತಿ-ಭಕ್ತಿ ಎಂತಹದ್ದು, ಎಂಬುವುದಕ್ಕೆ ಇಂದಿನ ಸಿಹಿ ಸುದ್ದಿಯೇ ಸಾಬಿತಾಯಿತು. ರಾಜಕೀಯ ದುರುದ್ದೇಶದಿಂದ ಮಾನ್ಯ ಸುಪ್ರೀಂ ಕೋರ್ಟ್ ದಲ್ಲಿ ಕೇಸ ದಾಖಲಿಸಿ, ಸಾವಿರಾರು ರೈತರಿಗೆ, ಕಾರ್ಮಿಕರಿಗೆ ಅನ್ಯಾಯ ಮಾಡಿದ್ದರು. ಇದೀಗ ಮಾನ್ಯ ಸುಪ್ರೀಂ ಕೋರ್ಟ್, ಅನುಮತಿ ನೀಡಲು ಆದೇಶಿಸಿದ್ದು, ವಾರದಲ್ಲಿಯೇ ಸಂಪೂರ್ಣ ಕಾರ್ಯಾರಂಭ ಮಾಡಲಾಗುತ್ತಿದ್ದು, ಇದು ಸತ್ಯಕ್ಕೆ ಸಿಕ್ಕ ಜಯವಾಗಿದೆ. ಕುತಂತ್ರ ನಡೆಸಿದವರ ದುರುದ್ದೇಶ ನೆಲಕಚ್ಚಿದೆ ಎಂದು ಟ್ವೀಟ್ ಮಾಡಿದ್ದಾರೆ.

Key words: Supreme Court, MLA Yatnal, sugar factory