ನವದೆಹಲಿ,ಮೇ,8,2021(www.justkannada.in): ದೇಶಾದ್ಯಂತ ಆಕ್ಸಿಜನ್ ತ್ವರಿತ ಪೂರೈಕೆಗಾಗಿ ರಾಷ್ಟ್ರೀಯ ಟಾಸ್ಕ್ ಫೋರ್ಸ್ ಅನ್ನು ಸುಪ್ರೀಂಕೋರ್ಟ್ ರಚನೆ ಮಾಡಿದೆ.
ಇಡೀ ದೇಶಕ್ಕೆ ಆಮ್ಲಜನಕದ ಲಭ್ಯತೆ ಮತ್ತು ವಿತರಣೆಯನ್ನ ಮೌಲ್ಯಮಾಪನ ಮಾಡಲು ಮತ್ತು ಬದಲಾವಣೆಗಳನ್ನ ಶಿಫಾರಸು ಮಾಡಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನ ಸ್ಥಾಪಿಸಲಾಗಿದ್ದು ಈ ಟಾಸ್ಕ್ ಫೋರ್ಸ್ ನಲ್ಲಿ ಬೆಂಗಳೂರಿನ ಡಾ.ದೇವಿಶೆಟ್ಟಿ ಅವರಿಗೂ ಸ್ಥಾನ ನೀಡಲಾಗಿದೆ ಎನ್ನಲಾಗುತ್ತಿದೆ.
ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ರಚಿಸಲಾಗಿರುವ ಈ ಕೇಂದ್ರೀಯ ಟಾಸ್ಕ್ ಫೋರ್ಸ್ ನಲ್ಲಿ ನೀತಿ ಆಯೋಗದ ಸದಸ್ಯರು ಉಪಾಧ್ಯಕ್ಷರಾಗಿರುತ್ತಾರೆ. ಈ ಟಾಸ್ಕ್ ಫೋರ್ಸ್ ದೇಶಾದ್ಯಂತ ಆಕ್ಸಿಜನ್, ಔಷಧ ಹಂಚಿಕೆಗೆ ನೆರವಾಗಲಿದೆ.
Key words: Supreme Court- National Task Force –quick- supply -oxygen …