ಮೈಸೂರು,12,2021(www.justkannada.in): ಆಕ್ಸಿಜನ್ ಪ್ರಮಾಣ ಹೆಚ್ಚಳ ಕುರಿತು ಕರ್ನಾಟಕ ಹೈಕೋರ್ಟ್ ಆದೇಶವನ್ನ ಸುಪ್ರೀಂಕೋರ್ಟ್ ಎತ್ತಿಹಿಡಿದ ಬೆನ್ನಲ್ಲೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದು, ಈ ನಡುವೆ ಮೈಸೂರಿಗೆ 20 ಮೆಟ್ರಿಕ್ ಟನ್ ಆಕ್ಸಿಜನ್ ಆಗಮಿಸಿದೆ.
ಕೇಂದ್ರ ಸರ್ಕಾರದಿಂದ ಮೈಸೂರಿಗೆ 20 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಯಾಗಿದ್ದು ಆಕ್ಸಿಜನ್ ಹೊತ್ತು ಬಂದ ಕಂಟೈನರ್ ನಂಜನಗೂಡಿನ ಕಡಗೊಳ ಕೈಗಾರಿಕಾ ಪ್ರದೇಶಕ್ಕೆ ತಲುಪಿದೆ. ನಂಜನಗೂಡಿನಲ್ಲಿ ಹಾಲಿ ಆಮ್ಲಜನಕ ಶೇಖರಣೆ ಮಾಡುವ ಘಟಕವಿದ್ದರೂ ಕಾರ್ಯನಿರ್ವಹಿಸದ ಹಿನ್ನೆಲೆ ಸದ್ಯ ತಾತ್ಕಾಲಿಕವಾಗಿ ಖಾಸಗಿ ಗ್ಯಾಸ್ ಸಂಸ್ಥೆಯಲ್ಲಿ ಆಕ್ಸಿಜನ್ ಶೇಖರಿಸಿ ಜಿಲ್ಲಾಡಳಿತ ತನ್ನ ಸುಪರ್ದಿಗೆ ಪಡೆದಿದೆ.
ಈ ಮೂಲಕ ಜಿಲ್ಲೆಗೆ ಕೇಂದ್ರದ 20 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಸಮಾಧಾನ ತಂದಂತಾಗಿದೆ. ರಾಜ್ಯಕ್ಕೆ ಆಕ್ಸಿಜನ್ ಪ್ರಮಾಣ ಹೆಚ್ಚಳ ಮಾಡಬೇಕು ಎಂಬ ಕರ್ನಾಟಕ ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗಿತ್ತು. ರಾಜ್ಯ ಹೈಕೋರ್ಟ್ ಆದೇಶ ಎತ್ತಿ ಹಿಡಿದು ಆಕ್ಸಿಜನ್ ಪ್ರಮಾಣ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚಿಸಿತ್ತು.
Key words: Supreme Court- order-20 MT – oxygen – center – Mysore.