ಬೆಂಗಳೂರು,ಜು,17,2019(www.justkannada.in): ಸುಪ್ರೀಂಕೋರ್ಟ್ ನೀಡಿರುವ ಆದೇಶ ಅತೃಪ್ತ ಶಾಸಕರಿಗೆ ನೈತಿಕ ಬಲ ತಂದುಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬ ವಿಚಾರ ಕುರಿತು ಸುಪ್ರೀಕೋರ್ಟ್ ನೀಡಿದ ತೀರ್ಪನ್ನ ಸ್ವಾಗತಿಸಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸುಪ್ರೀಂ ಆದೇಶ ಅತೃಪ್ತ ಶಾಸಕರಿಗೆ ನೈತಿಕ ಗೆ ಬಲ ತಂದುಕೊಟ್ಟಿದೆ. ಸುಪ್ರೀಂಕೋರ್ಟ್ ಆದೇಶದಿಂದ ಪ್ರಜಾಪ್ರಭುತ್ವಕ್ಕೆ ಗೆಲುವು ಸಿಕ್ಕಂತಾಗಿದೆ ಎಂದರು.
ಅತೃಪ್ತ ಶಾಸಕರಿಗೆ ವಿಪ್ ಅನ್ವಯವಾಗಲ್ಲ ಎಂದು ಸುಪ್ರೀಂ ಹೇಳಿದೆ, ಸದನಕ್ಕೆ ಬರುವಂತೆ ಒತ್ತಾಯಿಸುವಂತಿಲ್ಲ ಎಂದು ತೀರ್ಪು ನೀಡಿದೆ. ಇದು ಅತೃಪ್ತ ಶಾಸಕರಿಗೆ ನೈತಿಕ ಗೆಲುವಾಗಿದೆ. ಇನ್ನು ರಾಜೀನಾಮೆ ಬಗ್ಗೆ ಸ್ಪೀಕರ್ ಅದಷ್ಟು ಬೇಗ ತೀರ್ಮಾನ ತೆಗೆದುಕೊಂಡು ನಿರ್ಧಾರದ ಬಗ್ಗೆ ಸುಪ್ರೀಂಕೋರ್ಟ್ ಗೆ ತಿಳಿಸಬೇಕಿದೆ ಎಂದು ಬಿಎಸ್ ವೈ ತಿಳಿಸಿದರು.
ವಿಶ್ವಾಸಮತದಲ್ಲಿ ನಮಗೆ ಜಯ ಸಿಗುವ ಸಂಪೂರ್ಣ ನಂಬಿಕೆ ಇದೆ. ಕುಮಾರಸ್ವಾಮಿ ರಾಜೀನಾಮೆ ನೀಡಿವುದು ಖಚಿತ. ವಿಧಾನಸಭೆ ಯಲ್ಲಿ ನಮಗೆ ಬಹುಮತ ಇದೆ. ಹೀಗಾಗಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದುಅನಿವಾರ್ಯ. ನಾಳೆ ವಿಶ್ವಾಸಮತದಲ್ಲಿ ಸರ್ಕಾರ ಸೋಲಲಿದೆ ಎಂದು ಬಿಎಸ್ ವೈ ಭವಿಷ್ಯ ನುಡಿದರು.
Key words: Supreme Court –order- legislators – moral strength- Former CM BS Yeddyurappa