ನವದೆಹಲಿ,ಅ,22,2019(www.justkannada.in): ಸ್ಪೀಕರ್ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿದೆ.
ಈ ಮೂಲಕ ತಮ್ಮ ಪರ ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಬರಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಅನರ್ಹಶಾಸಕರಿಗೆ ಇಂದೂ ಸಹ ನಿರಾಸೆಯಾದಂತಾಗಿದೆ. ನಾಳೆ ಅನರ್ಹ ಶಾಸಕರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್ ನ ತ್ರಿಸದಸ್ಯಪೀಠದಲ್ಲಿ ನಡೆಯಲಿದ್ದು ನಾಳೆಯೇ ತೀರ್ಪು ಹೊರಬಿದ್ದರೇ ಅನರ್ಹ ಶಾಸಕರಿಗೆ ಟಿಕೆಟ್ ನಿರ್ಧಾರಕ್ಕೆ ಸ್ಪಷ್ಟನೆ ಸಿಕ್ಕಂತಾಗುತ್ತದೆ.
ಸುಪ್ರೀಂಕೋರ್ಟ್ ನಲ್ಲಿ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರು ಒಂದು ವಾರ ವಿಚಾರಣೆ ಮುಂದೂಡುವಂತೆ ನಿನ್ನೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್ ವಿಚಾರಣೆ ನಾಳೆಗೆ ಮುಂದೂಡಿತ್ತು. ಆದರೆ ಚುನಾವಣಾ ಆಯೋಗದ ಮನವಿ ಮೇರಿಗೆ ಮತ್ತೆ ಇಂದು ವಿಚಾರಣೆಗೆ ಕೈಗೆತ್ತುಕೊಂಡಿತ್ತು. ಇದೀಗ ವಿಚಾರಣೆಯನ್ನ ನಾಳೆಗೆ ಮುಂದೂಡಿದೆ.
key words: Supreme Court – postpones – hearing –disqualified MLA