ನವದೆಹಲಿ, ಜು,24,2019(www.justkannada.in): ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡಲು ನಿರ್ದೇಶನ ನೀಡುವಂತೆ ಕೋರಿ ಇಬ್ಬರು ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸುಪ್ರಿಂಕೋರ್ಟ್ ಮುಂದೂಡಿದೆ.
ಪಕ್ಷೇತರ ಶಾಸಕರಾದ ಎನ್ ನಾಗೇಶ್ ಹಾಗೂ ಆರ್ ಶಂಕರ್ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ನಿನ್ನೆ ಅರ್ಜಿ ವಿಚಾರಣೆಗೆ ಕೈಗೆತ್ತುಕೊಂಡಿದ್ದ ಸಿಜೆ ರಂಜನ್ ಗೋಗಯ್ ನೇತೃತ್ವದ ಪೀಠ ಇಂದಿಗೆ ವಿಚಾರಣೆ ಮುಂದೂಡಿತ್ತು. ಹಾಗೆಯೇ ವಿಧಾನಸಭೆ ಸ್ಪೀಕರ್ ಇಂದೇ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸುವ ನಿರೀಕ್ಷೆ ಹೊಂದಿರುವುದಾಗಿ ತಿಳಿಸಿತ್ತು.
ಅದರಂತೆ ನಿನ್ನೆ ಸಂಜೆಯೇ ವಿಶ್ವಾಸಮತಯಾಚನೆ ಪ್ರಕ್ರಿಯೆ ಮುಗಿದಿದ್ದು, ಹೆಚ್.ಡಿ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುಲ್ಲಿ ವಿಫಲರಾದರು. ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನೆಲೆ ಅರ್ಜಿ ವಿಚಾರಣೆ ನಡೆಸುವುದರಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ನಿರ್ದಿಷ್ಟ ಸಮಯವನ್ನು ತಿಳಿಸಿಲ್ಲ.
Key words: Supreme Court -postpones -hearing -independent MLA’s- petition