ನವದೆಹಲಿ,ನ,8,2019(www.justkannada.in): ಉಪಚುನಾವಣೆ ಮುಂದೂಡುವಂತೆ ಮನವಿ ಮಾಡಿದ ಅರ್ನಹ ಶಾಸಕರಿಗೆ ಸುಪ್ರೀಂಕೋರ್ಟ್ ನಲ್ಲಿ ಮತ್ತೆ ನಿರಾಸೆಯಾಗಿದೆ. ಉಪಚುನಾವಣೆ ಮುಂದೂಡಿಕೆಗೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಅನರ್ಹ ಶಾಸಕ ತೀರ್ಪು ಕಾಯ್ದಿರಿಸಲಾಗಿದೆ. ನವೆಂಬರ್ 11 ರಿಂದ ನೀತಿ ಸಂಹಿತೆ ಜಾರಿಯಾಗಲಿದೆ. ಹೀಗಾಗಿ ಉಪಚುನಾವಣೆ ಮುಂದೂಡುವಂತೆ ಚುನಾವಣೆ ಆಯೋಗಕ್ಕೆ ನಿರ್ದೇಶಿಸುವಂತೆ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದರು. ಆದರೆ ಮುಕುಲ್ ರೋಹ್ಟಗಿ ಮನವಿ ತಿರಸ್ಕರಿಸಿದ ನ್ಯಾ.ರಮಣ ನೇತೃತ್ವದ ತ್ರಿಸದಸ್ಯಪೀಠ, ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಇನ್ನು ನಮ್ಮ ಅರ್ಜಿಯನ್ನಾದರೂ ದಾಖಲಿಸಿಕೊಳ್ಳಿ ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿದರು. ಇದಕ್ಕೆ ಒಪ್ಪಿದ ನ್ಯಾ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರ ಅರ್ಜಿ ವಿಚಾರಣೆಗೆ ಲೀಸ್ಟ್ ಮಾಡಿದೆ.
ಸೋಮವಾರದಿಂದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗುವ ಹಿನ್ನೆಲೆಯಲ್ಲಿ ಅನರ್ಹರು ಆತಂಕಕ್ಕೆ ಒಳಗಾಗಿದ್ದಾರೆ.
Key words: Supreme Court – refuse–direct – Election Commission –postpone- by-elections.