ನವದೆಹಲಿ,ನ,13,2019(www.justkannada.in): ತಮ್ಮನ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ನೀಡಿದ್ದ ಆದೇಶ ಪ್ರಶ್ನಿಸಿ ಅನರ್ಹರು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಕ್ತಾಯಗೊಂಡು ಇಂದು ತೀರ್ಪು ಹೊರ ಬಿದ್ದಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ಪೀಠ ಇಂದು ಈ ಹಿಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರ ಆದೇಶವನ್ನು ಎತ್ತಿ ಹಿಡಿದಿದೆ. ಅಲ್ಲದೆ ಅನರ್ಹ ಶಾಸಕರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿ ತೀರ್ಪು ಪ್ರಕಟಿಸಿದೆ.
ಈ ಕುರಿತು ತೀರ್ಪು ನೀಡಿದ ಸುಪ್ರೀಂಕೋರ್ಟ್ , ಅನರ್ಹತೆಗೆ ಕಾಲಾವಧಿ ನಿರ್ಧರಿಸುವಂತಿಲ್ಲ. ಉಪಚುನಾವಣೆಗೆ ನಿರ್ಬಂಧ ವಿಧಿಸಿದ್ದು ಸರಿಯಲ್ಲ. ವಿಧಾನಸಭೆ ಅಂತ್ಯದವರೆಗೂ ಅನರ್ಹರಲ್ಲ. ಆದ್ರೆ ಮರು ಆಯ್ಕೆಯಾಗುವ ತನಕ ಮಂತ್ರಿಯಾಗುವಂತಿಲ್ಲ. ಅನರ್ಹರು ರಾಜ್ಯದ ಯಾವುದೇ ಸರ್ಕಾರಿ ಹುದ್ದೆ ಹೊಂದುವಂತಿಲ್ಲ. ಚುನಾವಣೆ ನಿಗದಿಯಂತೆ ನಡೆಯುತ್ತದೆ ಎಂದು ತೀರ್ಪು ನೀಡಿದೆ.
ಹಾಗೆಯೇ ಅನರ್ಹ ಶಾಸಕರು ಸಕಾರಣದಿಂದ ರಾಜೀನಾಮೆ ನೀಡಿದ್ದಾರೆ ಎಂದು ತೃಪ್ತಿಯಾದರೇ ರಾಜೀನಾಮೆ ಅಂಗೀಕರಿಸಬೇಕು. ರಾಜೀನಾಮೆ ಅಂಗೀಕರಿಸಿದರೂ ಮತ್ತು ಅನರ್ಹಗೊಳಿಸಿದರೂ ಶಾಸಕ ಸ್ಥಾನ ಖಾಲಿಯಾಗುತ್ತದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
Key words: Supreme Court- upheld – Speaker’s order-Opportunity – contest –elections-disqualified MLA