ಬೆಂಗಳೂರು,ಸೆಪ್ಟಂಬರ್,29,2022(www.justkannada.in): ಕೇಂದ್ರ ಸರ್ಕಾರ ನಿನ್ನೆ ಪಿಎಫ್ ಐ ಸಂಘಟನೆಯನ್ನ ಐದು ವರ್ಷಗಳ ಕಾಲ ನಿಷೇಧಿಸಿದ್ದು, ಈ ಸಂಬಂಧ ಪಿಎಫ್ ಐ ಆಸ್ತಿ ಮುಟ್ಟುಗೋಲು ಹಾಕುತ್ತೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ರಾಜ್ಯದಲ್ಲಿ ಪಿಎಫ್ ಐ ಬಗ್ಗೆ ಸರ್ವೆ ಮಾಡುತ್ತೇವೆ. ಸರ್ವೆ ಬಳಿಕ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ದೇಶಾದ್ಯಂತ ಬ್ಯಾನ್ ಮಾಡಲಾಗಿದೆ. ಕೇಂದ್ರ ಸರ್ಕಾರ ನಮಗೆ ಮುಂದಿನ ಜವಾಬ್ದಾರಿ ನೀಡಿದೆ. ನಿನ್ನೆ ಕೇಂಧ್ರ ಸರ್ಕಾರ ನಮಗೆ ಸೂಚನೆ ನೀಡಿದೆ ಎಂದರು.
ಪಿಎಫ್ ಐ ಬ್ಯಾನ್ ಆದ ಬಳಿಕ ಗಲಾಟೆ ಆಗಬಹುದು. ಗಲಭೆ ಬಗ್ಗೆ ಪೊಲೀಸರಿಗೆ ಮಾಹಿತಿ ಇದೆ. ಹೀಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ ಎಂದು ಅರಗ ಜ್ಞಾನೇಂದ್ರ ತಿಳಿಸಿದರು.
Key words: Survey – confiscation – PFI – Property -Home Minister -Araga Jnanendra.