ರಾಯಚೂರು,ಫೆಬ್ರವರಿ,26,2025 (www.justkannada.in): ಸರ್ಕಾರದ ಖಜಾನೆಗೆ 4 ಕೋಟಿ ರೂ. ಆರ್ಥಿಕ ನಷ್ಟವನ್ನುಂಟು ಮಾಡಿದ ಆರೋಪದ ಮೇಲೆ ಗ್ರೇಡ್ 2 ತಹಸೀಲ್ದಾರ್ ವೊಬ್ಬರನ್ನು ಅಮಾನತು ಮಾಡಲಾಗಿದೆ.
ರಾಯಚೂರು ಜಿಲ್ಲೆಯ ದೇವದುರ್ಗದ ಗ್ರೇಡ್ 2 ತಹಸಿಲ್ದಾರ್ ವೆಂಕಟೇಶ್ ಸಸ್ಪೆಂಡ್ ಆದವರು. ವಿವಿಧ ಪಿಂಚಣಿ ಯೋಜನೆ ತಿರಸ್ಕೃತ ಅರ್ಜಿಗಳನ್ನು ವಿಲೇವಾರಿ ಮಾಡುವ ವೇಳೆ ವಂಚನೆ ಎಸಗಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
2024-25ನೇ ಸಾಲಿನಲ್ಲಿ ದೇವದುರ್ಗ ತಾಲೂಕದಲ್ಲಿ 10,470 ಅರ್ಜಿಗಳ ವಿಲೇವಾರಿ ಮಾಡಲಾಗಿದ್ದು, ಫಲಾನುಭವಿಗಳಿಗೆ ವಿವಿಧ ಮಾಸಾಶನ ಮಂಜೂರು ಮಾಡಿ ವಂಚನೆ ಎಸಗಲಾಗಿದೆ. ಗ್ರಾಮ ಆಡಳಿತ ಅಧಿಕಾರಿ ಕಂದಾಯ ನಿರೀಕ್ಷಕರು ತಿರಸ್ಕರಿಸಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಿ ವಂಚನೆ ಎಸೆಗಿರುವ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವೆಂಕಟೇಶರನ್ನು ಅಮಾನತು ಮಾಡಲಾಗಿದೆ.
Key words: government, Economic loss, allegation, Grade 2 tehsildar, suspended