ಹುಬ್ಬಳ್ಳಿ,ಮಾರ್ಚ್,8,2025 (www.justkannada.in): ಹುಬ್ಬಳ್ಳಿಯಲ್ಲಿ ಅಂಗನವಾಡಿ ಮಕ್ಕಳ ಆಹಾರ ಅಕ್ರಮ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಕಸಬಾಪೇಟೆ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಕಾನ್ಸ್ ಟೇಬಲ್ ಗಳಾದ ಮಾಬುಸಾಬ್ವಾಲಿಕಾರ್, ಗೋಣೆಪ್ಪನವರ್ ಅಮಾನತುಗೊಂಡವರು. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಇಬ್ಬರು ಪಿಸಿಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಕರ್ತವ್ಯ ಲೋಪ, ಗುಪ್ತ ಮಾಹಿತಿ ಸಂಗ್ರಹಿಸುವಲ್ಲಿ ವಿಫಲ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ. ಫೆಬ್ರವರಿ 15ರಂದು ಗಬ್ಬೂರು ಬಳಿ ಮಕ್ಕಳ ಆಹಾರ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಂಗನವಾಡಿ ಮಕ್ಕಳ ಆಹಾರ ಪತ್ತೆಯಾಗಿತ್ತು.
Key words: food , Anganwadi children, Two police, suspended