ಮೈಸೂರು: ಸ್ವಚ್ಛ ಸರ್ವೇಕ್ಷಣ್ ಅಭಿಯಾನ ರಾಯಭಾರಿಗಳಾಗಿ ವಿವಿಧ ಕ್ಷೇತ್ರಗಳ ಸಾಧಕರು ಆಯ್ಕೆ

ಮೈಸೂರು,ಫೆಬ್ರವರಿ,12,2025 (www.justkannada.in): ಪ್ರಸಕ್ತ ಸಾಲಿನ ಸ್ವಚ್ಛ ಸರ್ವೇಕ್ಷಣ್ ಅಭಿಯಾನ- 2024ರಲ್ಲಿ ಮೈಸೂರು ಉತ್ತಮ ಶ್ರೇಯಾಂಕ ಪಡೆಯುವ ಉದ್ದೇಶದಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ರಾಯಭಾರಿಗಳಾಗಿ ನೇಮಕ ಮಾಡಲಾಗಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2014 ರಿಂದ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ನಡೆಸುತ್ತಿದೆ. ಈವರೆಗೂ ಮೈಸೂರು ನಗರವು ಉತ್ತಮ ಶ್ರೇಯಾಂಕಗಳನ್ನು ಗಳಿಸುತ್ತಾ ಬಂದಿದೆ. ಪ್ರಸಕ್ತ ಸಾಲಿನ ಸ್ವಚ್ಛ ಸರ್ವೇಕ್ಷಣ್ 2024 ರಲ್ಲಿಯೂ ಸಹ ಮೈಸೂರು ನಗರ ಭಾಗವಹಿಸುತ್ತಿದ್ದು, ಫೆಬ್ರವರಿ 15ನೇ ತಾರೀಖಿನಿಂದ ದೇಶದ್ಯಾದಂತ ಸರ್ವೇಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.

ಈ ಸರ್ವೇ ಕಾರ್ಯದಲ್ಲಿ ಮೈಸೂರು ಮಹಾನಗರ ಪಾಲಿಕೆಯು ಉತ್ತಮ ಶ್ರೇಯಾಂಕ ಗಳಿಸುವ ಸಲುವಾಗಿ ಇಂದು ಪಾಲಿಕೆಯ ಶ್ರೀ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವವರು ಈ ಕೆಳಕಂಡ ಸಾಧಕರುಗಳನ್ನು ಸ್ವಚ್ಛತಾ ರಾಯಭಾರಿಗಳ ನೇಮಕ ಮಾಡಿಕೊಳ್ಳಲಾಗಿದೆ.

  1. ಜಾವಗಲ್ ಶ್ರೀನಾಥ್: ಕ್ರಿಕೆಟ್ ಆಟಗಾರರು
  2. ವೇದಾಕೃಷ್ಣಮೂರ್ತಿ: ಮಹಿಳಾ ಕ್ರಿಕೆಟ್ ಆಟಗಾರರು
  3. ಅನನ್ಯ ಭಟ್: ಖ್ಯಾತ ಗಾಯಿತಿ
  4. ಧರ್ಮೇಂದ್ರ: Social Media Infuencer
  5. ಅಮೃತಾ ಅಯ್ಯಂಗಾರ್ : ಚಲನಚಿತ್ರ ನಟಿ
  6. ಡಾ.ಉಷಾ ಹೆಗಡೆ: ಪರ್ವತಾ ರೋಹಿ
  7. ಬಿ. ಚೈತ್ರ: ಖೋ ಖೋ ಪಟು

ಮೈಸೂರು ನಗರದ ಸ್ವಚ್ಛತೆಗೆ ಮತ್ತು ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಾಲಿಕೆಯೊಂದಿಗೆ ಕೈ ಜೋಡಿಸುತ್ತಿರುವ ಈ ಕೆಳಕಂಡ ವ್ಯಕ್ತಿಗಳನ್ನು ಸ್ವಚ್ಛತಾ ಚಾಂಪಿಯನ್‌ ಗಳೆಂದು ಗುರ್ತಿಸಿ ಗೌರವಿಸಲಾಯಿತು.

  1. ಲೀಲಾ ವೆಂಕಟೇಶ್
  2. ಡಾ. ಮಧುಸೂದನ್ ಪಿ.ಎಸ್
  3. ಡಾ. ಅಜಯ್ ಕುಮಾರ್ ಜೈನ್
  4. ಡಾ. ಸ್ವಪ್ನ
  5. ಎನ್. ರಾಘವನ್
  6. ಸೈಯದ್ ಅಬ್ದುಲ್ ಅಜೀಜ್
  7. ಅಮೂಲ್ಯ

Key words: Mysore, Swachh Survekshan Abhiyan, ambassadors