ಒಕ್ಕಲಿಗ ಸಿಎಂ ಕೆಳಗಿಳಿಸಿದ್ದನ್ನ ಸ್ವಾಮೀಜಿ ಕೇಳಬೇಕಿತ್ತು-ಮೈತ್ರಿ ನಾಯಕರ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಲೇವಡಿ.

ಬೆಂಗಳೂರು,ಏಪ್ರಿಲ್,10, 2024 (www.justkannada.in): ಆದಿಚುಂಚನಗಿರಿ ಮಠಕ್ಕೆ ಜೆಡಿಎಸ್-ಬಿಜೆಪಿ ಮೈತ್ರಿ ನಾಯಕರು ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನಮ್ಮ ಅಭ್ಯರ್ಥಿಗಳು ಸಹ ಸ್ವಾಮೀಜಿಗಳ ಬಳಿ ಹೋಗಿದ್ದರು ಸ್ವಾಮೀಜಿ ಯಾರಿಗೂ ಬೆಂಬಲಿಸಲ್ಲ. ಸ್ವಾಮೀಜಿ ಆಶೀರ್ವಾದ ಮಾಡುತ್ತಾರೆ. ವಿಭೂತಿ ಹಚ್ಚುತ್ತಾರೆ. ಸ್ವಾಮೀಜಿ ನಮ್ಮ ಪರವೂ ಅಲ್ಲ ಬಿಜೆಪಿ ಪರವೂ ಅಲ್ಲ ಎಂದರು.

ಮೈತ್ರಿ ಸರ್ಕಾರ ಬೀಳಿಸಿದ್ದೇ ಬಿಜೆಪಿಯವರು ಅಲ್ವಾ..? ನಮ್ಮ ಒಕ್ಕಲಿಗೆ ಮುಖ್ಯಮಂತ್ರಿಯನ್ನ ಕೆಳಗಿಳಿಸಿದ್ದು ಬಿಜೆಪಿಯವರು ಅಲ್ವಾ..?   ಮಠಕ್ಕೆ  ಭೇಟಿ ನೀಡಿದ್ದಾಗ ಸ್ವಾಮೀಜಿಗಳು ಈ ಬಗ್ಗೆ ಕೇಳಬೇಕಿತ್ತು. ನಮ್ಮ ಒಕ್ಕಲಿಗ ಸಿಎಂ ಇಳಿಸಿದ್ರಲ್ಲ ಅದನ್ನ ಕೇಳುವ ಶಕ್ತಿ ಶ್ರೀಗಳಿಗೆ ಇದ್ಯೋ ಇಲ್ವೋ ಗೊತ್ತಿಲ್ಲ. ಯಾವುದನ್ನ ಮುಚ್ಚಿಡೋಕೆ ಆಗಲ್ಲ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.

Key words: Swamiji, Okkaliga, CM, DK Shivakumar