ನವದೆಹಲಿ,ಜೂ,27,2019(www.justkannada.in): ಪಂಜಾಬ್ ನ್ಯಾಶನಲ್ ಬ್ಯಾಂಕ್ ಸಾವಿರಾರು ಕೋಟಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರಿಸಿಕೊಂಡಿರುವ ನೀರವ್ ಮೋದಿಗೆ ಸೇರಿದ ಎರಡು ಬ್ಯಾಂಕ್ ಅಕೌಂಟ್ ಗಳನ್ನ ಸ್ವಿಟ್ಜರ್ ಲ್ಯಾಂಡ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ನೀರವ್ ಮೋದಿ ಮತ್ತು ಸಹೋದರಿ ಪೂರ್ವಿಗೆ ಸೇರಿದ 2 ಖಾತೆಗಳನ್ನು ಸ್ವಿಟ್‌ಝರ್‌ಲ್ಯಾಂಡ್ ಸರಕಾರ ಸೀಜ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬ್ಯಾಂಕ್ ಅಕೌಂಟ್ ನಲ್ಲಿ 283 ಕೋಟಿ ರೂ ಹಣವಿತ್ತು ಎನ್ನಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 13 ಸಾವಿರ ಕೋಟಿಗೂ ಹೆಚ್ಚು ಹಣವನ್ನ ವಂಚನೆ ಮಾಡಿ ನೀರವ್ ಮೋದಿ ಪರಾರಿಯಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಲೇವಾದೇವಿ ಕಾಯ್ದೆಯಡಿ ನೀರವ್ ಮೋದಿ ವಿರುದ್ಧ ದೂರು ದಾಖಲಾಗಿದೆ, ಸದ್ಯ ಲಂಡನ್ ನಲ್ಲಿರುವ ನೀರವ್ ಮೋದಿ ಜಾಮೀನನ್ನು ಇಂಗ್ಲೆಂಡ್ ನ್ಯಾಯಾಲಯ 4 ಬಾರಿ ವಜಾಗೊಳಿಸಿದೆ.
Key words: Swiss government – businessman -Neerav Modi -bank account -siege.