ಕೋಲಾರ,ಫೆ,7,2020(www.justkannada.in): ಈಗ ಸಿಎಂ ಬಿಎಸ್ ಯಡಿಯೂರಪ್ಪ ಮೇಲೆ ಸಿದ್ದರಾಮಯ್ಯ ಅನುಕಂಪ ತೋರುತ್ತಿದ್ದಾರೆ. ನಾನು 14 ತಿಂಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂಸೆ ಅನುಭವಿಸಿದ್ದೆ. ಅಂದು ನನ್ನ ಮೇಲೆ ಏಕೆ ಅನುಕಂಪ ತೋರಲಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯಗೆ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಕೋಲಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಅಂದು ನಾನು 14 ತಿಂಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹಿಂಸೆ ಅನುಭವಿಸಿದೆ. ಆದರೆ ಆಗ ಸಿದ್ದರಾಮಯ್ಯ ನನ್ನ ಮೇಲೆ ಅನುಕಂಪ ತೋರಲಿಲ್ಲ. ಈಗ ಸಿಎಂ ಬಿಎಸ್ ವೈ ಮೇಲೆ ತೋರಿಸುತ್ತಿದ್ದಾರೆ. ಬಾದಾಮಿಗೆ ಹೆಚ್ಚು ಅನುದಾನ ಕೊಟ್ಟಿದ್ದು ನನ್ನ ಅವಧಿಯಲ್ಲಿ. ಹೆಚ್ಚು ಅನುದಾನ ಬಿಡುಗಡೆಗೆ ಅನುಮತಿ ಕೊಟ್ಟಿದ್ದು ನನ್ನ ಅವಧಿಯಲ್ಲಿ. ಇದನ್ನ ಸಿದ್ಧರಾಮಯ್ಯ ಮನವರಿಕೆ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಸಮ್ಮಿಶ್ರ ಸರ್ಕಾರವನ್ನ ನಾನು ಮಾರಾಟಕ್ಕೆ ಇಟ್ಟಿರಲಿಲ್ಲ. ನನ್ನ ಕುಟುಂಬದ ಬಗ್ಗೆ ಯಾವುದೇ ಈರ್ಷ್ಯೆಗೊಳಗಾಗದೆ ಟೀಕಿಸಿಲಿ. ಆದರೆ ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಬಾರದು ಎಂದು ಸಿದ್ಧರಾಮಯ್ಯಗೆ ಹೆಚ್.ಡಿ ಕುಮಾರಸ್ವಾಮಿ ಕುಟುಕಿದರು.
ಹಾಗೆಯೇ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಸಂಪುಟ ವಿಸ್ತರಣೆಯಲ್ಲಿ ಗೊಂದಲ ಇರುವುದನ್ನ ಗಮನಿಸಿದ್ದೇನೆ. ಬಿಎಸ್ ಯಡಿಯೂರಪ್ಪ ಅನುಭವದಲ್ಲಿ ಇದು ಸರ್ವೇ ಸಾಮಾನ್ಯ. ಬಿಎಸ್ ವೈ ತಮ್ಮ ಅನುಭವದಲ್ಲಿ ಇದರಿಂದ ಹೊರ ಬರುತ್ತಾರೆ. ನಾನು ಬಿಜೆಪಿಯ ಯಾವುದೇ ಶಾಸಕರನ್ನ ಸಂಪರ್ಕಿಸಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ನುಡಿದರು.
Key words: sympathy – BS yeddyurappa-Former CM -HD Kumaraswamy -against -Siddaramaiah.