ಮೈಸೂರು,ಮೇ,24,2021(www.justkannada.in): ಬ್ಲ್ಯಾಕ್ ಫಂಗಸ್ ರೋಗದ ಲಕ್ಷಣ ಇದ್ದವರು ಆದಷ್ಟು ಬೇಗನೆ ಆಸ್ಪತ್ರೆಗೆ ಬನ್ನಿ. ಚಿಕಿತ್ಸೆ ಪಡೆಯಿರಿ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕರೆ ನೀಡಿದರು.
ಮೈಸೂರಿನಲ್ಲಿ ಕೆ.ಆರ್.ಆಸ್ಪತ್ರೆ ಭೇಟಿ ನೀಡಿದ ಬಳಿಕ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ ಇದೆ. ಕೆ.ಆರ್ ಆಸ್ಪತ್ರೆಯಲ್ಲಿ 17, ಜೆಎಸ್ ಎಸ್ ಆಸ್ಪತ್ರೆಯಲ್ಲಿ 3, ಅಪೋಲೋದಲ್ಲಿ 1 ಪ್ರಕರಣಗಳಿವೆ. ಆದರೆ ಬ್ಲಾಕ್ ಫಂಗಸ್‌ನಿಂದ ಮೃತಪಟ್ಟವರು ಒಬ್ಬರು ಮಾತ್ರ. ಈಗಾಗಲೇ ಬ್ಲಾಕ್ ಫಂಗಸ್ ಇದ್ದವರಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಆದರೆ ರೋಗದ ಲಕ್ಷಣ ಇದ್ದವರು ಆದಷ್ಟು ಬೇಗನೆ ಆಸ್ಪತ್ರೆಗೆ ಬನ್ನಿ ಎಂದರು.
ಈಗಾಗಲೇ ಹಲವರಿಗೆ ಕಣ್ಣಿನವರೆಗು ಸರ್ಜರಿ ಮಾಡಲಾಗಿದೆ. ಒಂದೇ ಕಡೆ ಮೂಗು ಸೋರುವಿಕೆ, ತಲೆ ವಿಪರೀತ ನೋವು. ಇದೆಲ್ಲವು ಬ್ಲಾಕ್ ಫಂಗಸ್ ನ ಸಿಮ್ಟಮ್ಸ್ ಆಗಿದೆ. ಈಗ ಕೆ.ಆರ್ ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳು ಕ್ಷೇಮವಾಗಿದ್ದಾರೆ. ಇದು ಗುಣಮುಖವಾಗಲು ಬರೋಬ್ಬರಿ ಮೂರು ವಾರವೇ ಬೇಕು. ಮೆಡಿಕೇಷನ್ ಹಾಗೂ ಸರ್ಜರಿಯೇ ಇದಕ್ಕೆ ಮದ್ದು. ಮೊದಲ ಹಂತದಲ್ಲೇ ಇದ್ದರೆ ಅದನ್ನ ಔಷಧೀಯಲ್ಲೇ ಗುಣಪಡಿಸಬಹುದು. ಆದರೆ ನಂತರ ಬಂದರೆ ಸರ್ಜರಿ ಅನಿವಾರ್ಯವಾಗಿದೆ. ಆದಷ್ಟು ಜನರು ಈ ಬಗ್ಗೆ ನಿಗಾ ವಹಿಸಿ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.
Key words: symptoms – black fungus- hospital –treatment-Mysore DC- Rohini Sindhuri