ಮೈಸೂರು,ಜುಲೈ,11,2023(www.justkannada.in): ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ಮೂರೇ ತಿಂಗಳಿಗೆ ಆರೋಪಿಗಳು ಹೊರಗೆ ಬಂದ್ರೆ ನಾನು ಮತ್ತು ಮಗಳು ಕತ್ತು ಕೊಯ್ದುಕೊಂಡು ಸಾಯುತ್ತೇನೆ ಹೀಗೆಂದು ಕೊಲೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಕಾಂಗ್ರೆಸ್ ಮುಖಂಡ ಸುನೀಲ್ ಬೊಸ್ ಮುಂದೆ ಎಚ್ಚರಿಕೆ ನೀಡಿದರು.
ಇಂದು ಟಿ.ನರಸೀಪುರದ ವೇಣುಗೋಪಾಲ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸುನೀಲ್ ಬೋಸ್ ಸಾಂತ್ವನ ಹೇಳಿದರು. ಈ ವೇಳೆ ಸುನೀಲ್ ಬೊಸ್ ಮುಂದೆ ಮೃತ ವೇಣುಗೋಪಾಲ್ ಪತ್ನಿ ಅಳಲು ತೋಡಿಕೊಂಡರು. ನಾನು ಕುರುಬ ಸಮುದಾಯಕ್ಕೆ ಸೇರಿದವಳು. ನನ್ನ ಗಂಡ ನಾಯಕ ಸಮುದಾಯಕ್ಕೆ ಸೇರಿದವನು. ಇಬ್ಬರು ಪ್ರೀತಿಸಿ ಮದುವೆ ಆಗಿದ್ದವು. 7 ವರ್ಷ ಜೀವನ ಸಾಗಿಸಿದ್ದೇನೆ. ಈಗ ನನಗೆ ಯಾರು ಗತಿ. ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಬೇಕು. ಮೂರೇ ತಿಂಗಳಿಗೆ ಆರೋಪಿಗಳು ಹೊರಗೆ ಬಂದ್ರೆ ನಾನು ಮತ್ತು ಮಗಳು ಕತ್ತು ಕೊಯ್ದುಕೊಂಡು ಸಾಯುತ್ತೇನೆ. ಹನುಮ ಜಯಂತಿ ನಡೆದ ವೃತ್ತದ್ದಲ್ಲೇ ನಮ್ಮ ಸಾವು ಎಚ್ಚರಿಕೆ ನೀಡಿದರು. ಹಿಂದೂಗಳನ್ನೇ ಮುಗಿಸುತ್ತಿದ್ದಾರಲ್ಲ ಸರ್ ಎಂದು ವೇಣುಗೋಪಾಲ್ ಪತ್ನಿ ಪೂರ್ಣಿಮಾ ಪ್ರಶ್ನಿಸಿದರು. ತಕ್ಷಣ ಯಾರದ್ದೇ ಆದರೂ ಪ್ರಾಣ ಒಂದೇ ಎಂದು ಸುನೀಲ್ ಬೋಸ್ ಹೇಳಿದರು.
ಬಳಿಕ ಮಾತನಾಡಿದ ಸುನೀಲ್ ಬೋಸ್ , ಚಕ್ರವರ್ತಿ ಸೂಲಿಬೆಲೆಗೆ ತೀಕ್ಷ್ಣ ತಿರುಗೇಟು ನೀಡಿದರು. ಚಕ್ರವರ್ತಿ ಸೂಲಿಬೆಲೆಗೆ ತಲೆ ಸರಿ ಇಲ್ಲ. ಅವರಿಗೆ ಮೊದಲು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅಗತ್ಯ ಇದೆ. ಸುಳ್ಳಿನಿಂದಲೆ ಜೀವನ ಕಟ್ಟಿಕೊಂಡಿರುವ ವ್ಯಕ್ತಿ ಅವರು. ಈ ಕೊಲೆ ಪ್ರಕರಣದಲ್ಲೂ ಸುಳ್ಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಕೊಲೆ ವಿಚಾರದಲ್ಲಿ ಸೂಲಿಬೆಲೆಗೆ ಪ್ರಾಥಮಿಕ ಮಾಹಿತಿ ಇಲ್ಲ. ಸತ್ತಿರುವ ಯುವಕ ನಾಯಕ ಸಮುದಾಯದ ವ್ಯಕ್ತಿ. ಆದರೆ ಸುಲಿಬೆಲೆ ಅವರನ್ನ ದಲಿತ ಸಮುದಾಯ ಎಂದು ಸುಳ್ಳು ಹೇಳುತ್ತಾರೆ. ಸೂಲಿಬೆಲೆಗೆ ಮೊದಲು ಚಿಕಿತ್ಸೆ ಕೊಡಿಸಿ ಎಂದು ಕಿಡಿಕಾರಿದರು.
ಪ್ರಕರಣದ A4 ಆರೋಪಿ ಬಿಜೆಪಿ ಪಾಲಿಕೆ ಸದಸ್ಯೆಯ ತಮ್ಮ.
ವೈಯಕ್ತಿಕ ವಿಚಾರಕ್ಕೆ ಮಾಡುವ ಕೊಲೆಗೆ ಒಬ್ಬ ವ್ಯಕ್ತಿ ಅಥವಾ ಪಕ್ಷ ಹೇಗೆ ಹೊಣೆಗಾರರಾಗುತ್ತಾರೆ. ವೈಯಕ್ತಿಕ ಗಲಭೆಗಳು ,ಕೃತ್ಯಗಳಿಗೆ ನಾವು ಹೊಣೆಗಾರರಾಗಲು ಸಾಧ್ಯವಿಲ್ಲ. ಬಿಜೆಪಿ ಕಾರ್ಯಕರ್ತನೊಬ್ಬ ಈ ರೀತಿ ಘಟನೆಯಲ್ಲಿ ಭಾಗಿಯಾದ್ರೆ ಅದರ ಹೊಣೆಯನ್ನ ಬಿಜೆಪಿ ಹೊರುತ್ತದಾ..? ಇಂತಹ ಸಾವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಪಕ್ಷದ ಅನೇಕ ಕಾರ್ಯಕರ್ತರು ನಮ್ಮ ಜೊತೆ ಪೋಟೊ ತೆಗೆಸಿಕೊಂಡಿರುತ್ತಾರೆ. ನಾನು ಈ ಭಾಗದ ಮುಖಂಡ. ಅವರು ಮಾಡುವ ವೈಯಕ್ತಿಕ ತಪ್ಪಿಗೆ ನಾವೇಗೆ ಪ್ರೇರಣೆಯಾಗುತ್ತೇವೆ. ಪ್ರಕರಣದ A4 ಆರೋಪಿ ಬಿಜೆಪಿ ಪಾಲಿಕೆ ಸದಸ್ಯೆಯ ತಮ್ಮನಾಗಿದ್ದಾನೆ. ಇದನ್ನು ನೋಡಿ ಬಿಜೆಪಿಯವರೇ ಹೇಳಿಕೊಟ್ಟಿದ್ದಾರೆ ಎಂದು ನಾನು ಪ್ರಶ್ನಿಸಿದರೆ ಅದು ಹೇಗಿರುತ್ತದೆ ಹೇಳಿ. ಟಿ.ನರಸೀಪುರದಲ್ಲಿ ಬಲಾಡ್ಯ ಇಲ್ಲ ನೀನು ಕೊಲೆ ಮಾಡು ನಾವು ರಾಜಕಾರಣ ಮಾಡುತ್ತೇವೆ ಎಂದು ಆತನಿಗೆ ಹೇಳಿಕೊಟ್ಟಿದ್ರಾ ಎಂದು ನಾನು ಪ್ರಶ್ನಿಸುತ್ತೇನೆ. ಈ ಪ್ರಶ್ನೆಗೆ ಅವರು ಉತ್ತರಿಸಲು ಸಾಧ್ಯನಾ…? ಎಂದು ಬಿಜೆಪಿ ನಾಯಕರಿಗೆ ಸುನೀಲ್ ಬೋಸ್ ಚಾಟಿ ಬೀಸಿದರು.
ಸಾವಿನಲ್ಲಿ ರಾಜಕಾರಣ ಯಾರು ಮಾಡಬಾರದು. ಬಿಜೆಪಿಯವರು ಶವದ ಮೇಲೆ ರಾಜಕಾರಣ ಮಾಡಲು ಹೊರಟ್ಟಿದ್ದಾರೆ. ಬಿಜೆಪಿಗೆ ಸದಾ ಕಾಲ ಇಂತ ಕೊಲೆ ಗಲಭೆಗಳ ಬಗ್ಗೆ ಆಸಕ್ತಿ. ನಾನು ಈ ಕೊಲೆಯನ್ನ ಖಂಡಿಸುತ್ತೇನೆ. ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಮ್ಮ ತಂದೆ ಸೂಚನೆ ನೀಡಿದ್ದಾರೆ ಎಂದು ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಹೇಳಿದರು.
Key words: T.Narasipur- Young Brigade worker-murder Case-congress leader-sunil bose