ಪಲ್ಲೆಕಿಲೆ, ಸೆಪ್ಟೆಂಬರ್ 09, 2019 (www.justkannada.in): ಆತಿಥೇಯ ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ 3 ಪಂದ್ಯಗಳ ಟಿ20 ಸರಣಿ ಗೆದ್ದು ಸಂಭ್ರಮಿಸಿದೆ.
ದ್ವಿತೀಯ ಪಂದ್ಯದಲ್ಲಿ ಕಿವೀಸ್ ತಂಡ 4 ವಿಕೆಟ್ಗಳಿಂದ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 9 ವಿಕೆಟಿಗೆ 161 ರನ್ ಗಳಿಸಿದರೆ, ನ್ಯೂಜಿಲ್ಯಾಂಡ್ 19.4 ಓವರ್ಗಳಲ್ಲಿ 6 ವಿಕೆಟಿಗೆ 165 ರನ್ ಬಾರಿಸಿತು.
ಮೊದಲ ಪಂದ್ಯದಲ್ಲಿ ಟಿಮ್ ಸೌಥಿ ಪಡೆ 5 ವಿಕೆಟ್ಗಳಿಂದ ಜಯಿಸಿತ್ತು. 3ನೇ ಹಾಗೂ ಅಂತಿಮ ಪಂದ್ಯ ಸೆ. 6ರಂದು ಇದೇ ಅಂಗಳದಲ್ಲಿ ನಡೆಯಲಿದೆ.