ಬೆಂಗಳೂರು, ಅಕ್ಟೋಬರ್ 31, 2021 (www.justkannada.in): ಇಂದು ಟಿ-20 ವಿಶ್ವಕಪ್ ನಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ಅನ್ನು ಎದುರಿಸಲಿದೆ.
ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ ಸೋತ ಟೀಮ್ ಇಂಡಿಯಾ ಪಡೆ ಅಭ್ಯಾಸಕ್ಕೆ ಅಧಿಕ ಸಮಯಾವಕಾಶ ಸಿಕ್ಕಿತ್ತು.
ನೆಟ್ ಅಭ್ಯಾಸದಲ್ಲಿ ಹೆಚ್ಚು ನಿರತರಾಗಿದ್ದ ಆಟಗಾರರು ಇಂದು ನಡೆಯಲಿರುವ ಪಂದ್ಯದಲ್ಲಿ ಕಿವೀಸ್ ಎದುರಿಸಲಿದ್ದಾರೆ. ಪಂದ್ಯದಲ್ಲಿ ಟಾಸ್ ಹೆಚ್ಚು ನಿರ್ಣಾಯಕವಾಗಲಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಕ್ಕೂ ನೆರವಾಗಲಿದೆ. ನಿಧಾನಗತಿ ಬೌಲಿಂಗ್ ಗೆ ಹೆಚ್ಚು ಪ್ರಶಸ್ತವಾಗಿರುವ ಪಿಚ್ ನಲ್ಲಿ ನಂತರ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭದಾಯಕವಾಗಲಿದೆ.
ಟಿ-20 ವಿಶ್ವಕಪ್ ನ ಸೂಪರ್-12ರ ಹಂತದಲ್ಲಿ ಇಲ್ಲಿವರೆಗೆ 9 ಪಂದ್ಯಗಳು ನಡೆದಿವೆ. ಅದರಲ್ಲಿ ಪ್ರಮುಖವಾಗಿ ನಂತರ ಬ್ಯಾಟಿಂಗ್ ಮಾಡಿದ 8 ತಂಡಗಳು ವಿಜಯ ಶಾಲಿಯಾಗಿವೆ.