ಬೆಂಗಳೂರು, ಅಕ್ಟೋಬರ್ 30, 2021 (www.justkannada.in): ದಕ್ಷಿಣ ಆಫ್ರಿಕಾ ತಂಡ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಪಂದ್ಯದಲ್ಲಿ ಇಂದು ಶ್ರೀಲಂಕಾವನ್ನು ಎದುರಿಸಲಿದೆ.
ಟೂರ್ನಿಯಲ್ಲಿ ಈ ವರೆಗೆ ಉತ್ತಮ ಸಾಮರ್ಥ್ಯ ತೋರುತ್ತ ಬಂದಿರುವ ಉಭಯ ತಂಡಗಳ ಈ ಹಣಾಹಣಿ ಕುತೂಹಲ ಕೆರಳಿಸಿದೆ.
ಬೌಲಿಂಗ್ ವಿಭಾಗವನ್ನು ಹೆಚ್ಚು ನೆಚ್ಚಿಕೊಂಡಿರುವ ಶ್ರೀಲಂಕಾ ಎದುರಾಳಿ ತಂಡದ ಫಫ್ ಡು ಪ್ಲೆಸಿ, ರೀಜಾ ಹೆನ್ರಿಕ್ಸ್, ರಸಿ ವ್ಯಾನ್ ಡೆರ್ ಡುಸೆನ್, ಏಡನ್ ಮರ್ಕರಮ್, ಡೇವಿಡ್ ಮಿಲ್ಲರ್ ಮುಂತಾದವರನ್ನು ನಿಯಂತ್ರಿಸುವುದೇ ಎಂಬುದು ಈ ಪಂದ್ಯದ ಪ್ರಮುಖ ಅಂಶ.
ಇಂಗ್ಲೆಂಡ್- ಆಸ್ಟ್ರೇಲಿಯಾ ಫೈಟ್
ಇಂಗ್ಲೆಂಡ್ಗೆ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಈಗ ಭಾರಿ ಸವಾಲು ಎದುರಾಗಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಏಯಾನ್ ಮಾರ್ಗನ್ ಬಳಗ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಮೊದಲ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿರುವ ಉಭಯ ತಂಡಗಳು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿವೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್ ಹಾದಿ ಸುಗಮವಾಗಿಸುವ ಹಂಬಲವೂ ಈ ತಂಡಗಳಿಗೆ ಇದೆ.