ಬೆಂಗಳೂರು, ನ.19,2023: (www.justkannada.in news) ಅನಗತ್ಯ ವಿವಾದಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಕುಂದುತ್ತಿದ್ಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಸಹಕಾರ ಸಚಿವ ರಾಜಣ್ಣ ಉತ್ತರಿಸಿದ್ದು ಹೀಗೆ..
ಸಿಎಂ ಸಿದ್ದರಾಮಯ್ಯ ಅವರನ್ನು ಜನ ಟಗರು ಅಂತ ಕರೀತಾರೆ. ಎಂಟು, ಹತ್ತು ಕುರಿಗಳಿಗೆ ಒಂದೆರಡು ಟಗರು ಇರುತ್ವೆ. ಹಾಗೆ ಸಿದ್ದರಾಮಯ್ಯ ಕೂಡ ಟಗರು. ಟಗರು ರೀ ಟಗರು ಎಂದಿ ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಶಕ್ತಿ ಕುಂದಿಲ್ಲ. ಸಿದ್ದರಾಮಯ್ಯನವರಿಗೆ ಶಕ್ತಿ ಫುಲ್ ಇದೆ. ಅವರಲ್ಲಿ ಖಾಲಿ ಇದ್ರೆ ತುಂಬೋಣ, ಖಾಲಿನೇ ಇಲ್ಲವಲ್ಲ ಎಂದು ತಮ್ಮ ನಾಯಕ ಸಿದ್ದರಾಮಯ್ಯ ಅವರನ್ನು ಬಲವಾಗಿ ಸಚಿವ ಕೆ.ಎನ್.ರಾಜಣ್ಣ ಸಮರ್ಥಿಸಿಕೊಂಡರು.
ಬಹಿರಂಗ ಸಾಧ್ಯವಿಲ್ಲ:
ಸಿಎಂ ಸಚಿವರ ಸಭೆ ವಿಚಾರ, ಎಲ್ಲಾ ವಿಷಯ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಡಿ. ೯ ರಿಂದ ಅಧಿವೇಶನ ಪ್ರಾರಂಭವಾಗುತ್ತದೆ. ಎಲ್ಲರು ಕಡ್ಡಾಯವಾಗಿ ಹಾಜರಾಗಬೇಕು. ಮಂತ್ರಿಗಳು ಸಮರ್ಪಕವಾಗಿ ಉತ್ತರ ಕೊಡಬೇಕು ಎಂದು ಹೇಳಲಾಗಿದೆ ಎಂದು ಸಚಿವ ರಾಜಣ್ಣ ತಿಳಿಸಿದರು.
ವಕ್ಫ್ ವಿಚಾರದಲ್ಲಿ ಇಲ್ಲದ ಸುಳ್ಳುಗಳನ್ನ ಹೇಳ್ತಿದ್ದಾರೆ. ೩೧೬ ನೊಟೀಸ್ ಬಿಜೆಪಿಯವರೇ ಕೊಟ್ಟಿದ್ದರು . ಇದರ ಬಗ್ಗೆ ಗಮನಹರಿಸುವಂತೆ ಸೂಚಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಸರಿಪಡಿಸುವಂತೆ ಹೇಳಿದ್ದಾರೆ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ.
ಬಿಜೆಪಿಯವರು ಸುಳ್ಳು ಹೇಳಿಕೊಂಡು ಹೋಗ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಟಾಂಟಾಂ ಹೊಡೆಯುತ್ತಾರೆ. ನೀವುನಿಜ ಹೇಳಲ್ವಲ್ಲಾ ಅಂತ ಹೇಳಿದ್ದಾರೆ.
ತುಮಕೂರಿನಲ್ಲಿ ಸಮಾವೇಶ ಮಾಡ್ತೇವೆ
ಗೃಹ ಸಚಿವರು ತುಮಕೂರಿನಲ್ಲಿ ಮಾಡ್ತಾರೆ, ಅದು ಸರ್ಕಾರಿ ಸವಲತ್ತುಗಳ ಸಮಾವೇಶ. ಹಾಸನದಲ್ಲಿ ಪೊಲಿಟಿಕಲ್ ಸಮಾವೇಶ. ಡಿಸೆಂಬರ್ ೫ ರಂದು ಸಮಾವೇಶ ನಡೆಯಲಿದೆ ಎಂದರು.
key words: Karnataka, cooperative minister, Rajanna Siddaramaiah, Tagaru siddu