ಮೈಸೂರು,ಮೇ,19,2021(www.justkannada.in): ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿ ಕೋವಿಡ್ ನಿಯಮ ಉಲ್ಲಂಘಿಸಿದ ಸಿಎಂ ಪುತ್ರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದ್ದಾರೆ.
ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ರಾಜ್ಯದ ಜನರಿಗೊಂದು ನ್ಯಾಯ, ಸಿಎಂ ಪುತ್ರನಿಗೊಂದು ನ್ಯಾಯವೇ..? ಸಿಎಂ ಪುತ್ರನ ಜೊತೆ ಮೂವತ್ತು ಕಾರ್ಯಕರ್ತರು ದೇವಾಲಯ ಒಳಗೆ ಹೋಗಿದ್ದಾರೆ. ಇವರಿಗೆಲ್ಲಾ ಅನುಮತಿ ನೀಡಿದ್ದು ಯಾರು..? ಕಪಿಲಾ ನದಿಗೆ ಬಾಗಿನ ಅರ್ಪಿಸಿದ್ದಾರೆ. ಇದಕ್ಕೆ ಅನುಮತಿ ಇದೆಯೇ..? ಈ ಬಗ್ಗೆ ಜಿಲ್ಲಾಧಿಕಾರಿಗೆ ವಾಟ್ಸಪ್ ಮೂಲಕ ಕಂಪ್ಲೇಂಟ್ ಮಾಡಿದ್ದೇನೆ. ಇದಕ್ಕೆ ಜಿಲ್ಲಾಧಿಕಾರಿಗಳು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿಯ ಕೆಲ ನಾಯಕರು ನನ್ನ ವೈಯಕ್ತಿಕ ತೇಜೋವಧೆ ಮಾಡ್ತಿದ್ದಾರೆ. ನನ್ನ ವಿಚಾರದಲ್ಲಿ ಆಧಾರ ರಹಿತ ಆರೋಪ ಮಾಡ್ತಿದ್ದಾರೆ. ಬಿಜೆಪಿ ವಕ್ತಾರ ಮಹೇಶ್ ಗೆ ಎಚ್ಚರಿಕೆ ನೀಡ್ತಿದ್ದೇನೆ. ನನ್ನ ವೈಯಕ್ತಿಕ ತೇಜೋವಧೆ ಮಾಡಿದರೇ ನೀನು ಪಾಲಿಕೆ ಸದಸ್ಯನಾಗಿದ್ದಾಗ ನಡೆಸಿದ ಅವ್ಯವಹಾರ ಬಯಲು ಮಾಡುತ್ತೇನೆ. ಅಡಳಿತ ಪಕ್ಷದ ವೈಫಲ್ಯಗಳನ್ನು ಹೇಳುವುದು ನಮ್ಮ ಜವಾಬ್ದಾರಿ. ಅದನ್ನು ಹೇಳಬೇಡ ಎಂದು ಧಮ್ಕಿ ಹಾಕುವ ಅಧಿಕಾರ ನಿಮಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದರು.
Key words: Take action –against- CM’s -son – violated – covid rule-KPCC spokesperson -M. Laxman