ಬೆಂಗಳೂರು,ಆ,19,2020(www.justkannada.in): ನಿಗದಿತ ಗುರಿಗಿಂತ ಕಡಿಮೆ ಕೋವಿಡ್ ಟೆಸ್ಟ್ ಮಾಡುತ್ತಿರುವ ಹಿನ್ನೆಲೆ, ನಿಗದಿಪಡಿಸಿರುವ ಗುರಿಯಷ್ಟು ಕೊರೋನಾ ಟೆಸ್ಟ್ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದರು.
ನಿಗದಿತ ಗುರಿಗಿಂತ ಕಡಿಮೆ ಕೋವಿಡ್ ಟೆಸ್ಟ್ ಗಳನ್ನು ಮಾಡುತ್ತಿರುವ ಸರ್ಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರೊಂದಿಗೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಬುಧವಾರ ವಿಡಿಯೋ ಸಮಾಲೋಚನೆ ನಡೆಸಿದರು.
ಈ ವೇಳೆ ಈಗಾಗಲೇ ನೀಡಿರುವ ಗುರಿಯಂತೆ ಟೆಸ್ಟ್ ಗಳನ್ನು ನಡೆಸಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಸಂವಾದದ ವೇಳೆ ಕಾಲೇಜುಗಳ ಮುಖ್ಯಸ್ಥರು ನಿಗದಿತ ಗುರಿ ತಲುಪಲು ಎದುರಾಗಿರುವ ಅಡೆತಡೆಗಳ ಪ್ರಸ್ತಾಪಿಸಿದಾಗ, ಅವುಗಳನ್ನು ಬಗೆಹರಿಸುವುದಾಗಿಯೂ ಸಚಿವ ಸುಧಾಕರ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಸಂವಾದದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಕೋವಿಡ್ ಟೆಸ್ಟ್ ಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಶಾಲೀನಿ ರಜನೀಶ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Take action – covid test – specified target-Medical Education Minister -Dr K Sudhakar