ಬೆಂಗಳೂರು,ಸೆಪ್ಟಂಬರ್,24,2021(www.justkannada.in): ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸಭೆ ಕಲಾಪದಲ್ಲಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಟಾಕ್ ಫೈಟ್ ನಡೆದು ವಿಧಾನಸಭೆ ಕಲಾಪವನ್ನ ಮುಂದೂಡಲಾಯಿತು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪವಾಯಿತು. ಎನ್ ಇಪಿ ಎಂದರೇ ನಾಗ್ಪುರ ಎಜುಕೇಷನ್ ಪಾಲಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಏರುಧ್ವನಿಯಲ್ಲಿ ಕೂಗಿದರು. ಈ ವೇಳೆ ಟಾಂಗ್ ಕೊಟ್ಟ ಬಿಜೆಪಿ ಶಾಸಕ ಸಿ.ಟಿ ರವಿ ಅದು ರಾಷ್ಟ್ರೀಯ ಶಿಕ್ಷಣ ನೀತಿ ಎಂದರು.
ಇದೇ ವೇಳೆ ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಆರ್ ಎಸ್ ಎಸ್ ಎಜುಕೇಷನ್ ಪಾಲಿಸಿ ಅಂದ್ರೂ ನಾವು ಹೆದರುವುದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವುದು ಖಚಿತ. ಭಾರತದ ಭವಿಷ್ಯಕ್ಕಾಗಿ, ಭಾರತದ ಮಕ್ಕಳಿಗಾಗಿ ಎನ್ ಇಪಿ ಜಾರಿಯಾಗಬೇಕು. ಶಿಕ್ಷಣ ವ್ಯವಸ್ಥೆಯ ಬದಲಾವಣೆಯ ಅವಶ್ಯಕತೆ ಇದೆ ಎಂದರು. ಇದೇ ವೇಳೆ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನಾಡಿ, ಕಾಂಗ್ರೆಸ್ ನವರದ್ದು ಇಟಲಿ ಪಾಲಿಸಿ ಎಂದು ವ್ಯಂಗ್ಯವಾಡಿದರು.
ಈ ನಡುವೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಕಲಾಪವನ್ನ ಮುಂದೂಡಿದರು.
Key words: Talk fights- NEP – between -administration – opposition