ಬೆಂಗಳೂರು, ಫೆ.೧೦, ೨೦೨೫ : ತಮಿಳು ಮತ್ತು ಹಿಂದಿ ಚಿತ್ರರಂಗದ ಜನಪ್ರಿಯ ನಟ ಆರ್ ಮಾಧವನ್ ಭಾರತದ ಮೊದಲ ಬ್ರಿಕ್ಸ್ಟನ್ ಕ್ರಾಮ್ವೆಲ್ ಮೋಟಾರ್ಬೈಕ್ನ ಹೆಮ್ಮೆಯ ಮಾಲೀಕರಾಗಿದ್ದಾರೆ.
58 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮಾಧವನ್, ಆಗಾಗ್ಗೆ ತಮ್ಮ ಅಭಿನಯಕ್ಕಾಗಿ ಪ್ರಶಂಸೆ ಗಳಿಸುತ್ತಿದ್ದರೂ, ಈ ಬಾರಿ ಚಲನಚಿತ್ರ ವೃತ್ತಿಜೀವನಕ್ಕಿಂತ ಭಿನ್ನವಾದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ.
ಮಾಧವನ್ ಅವರು ಭಾರತದ ಮೊದಲ ಬ್ರಿಕ್ಸ್ಟನ್ ಕ್ರಾಮ್ವೆಲ್ ಮೋಟಾರ್ಬೈಕ್ನ ಹೆಮ್ಮೆಯ ಮಾಲೀಕ ಎನಿಸಿಕೊಳ್ಳುವ ಮೂಲಕ ಸುದ್ಧಿಯಲ್ಲಿದ್ದಾರೆ.
ಆಸ್ಟ್ರಿಯಾದ ಮೋಟಾರ್ ಸೈಕಲ್ ಬ್ರಾಂಡ್ ಭಾರತದಲ್ಲಿ ಅಧಿಕೃತವಾಗಿ ತನ್ನ ವಿತರಣೆಯನ್ನು ಪ್ರಾರಂಭಿಸಿದ್ದು, ಮಾಧವನ್ ಅವರಿಗೆ ಮೊದಲ ಬೈಕ್ ವಿತರಿಸಿದೆ. ಆ ಮೂಲಕ ಬ್ರಿಕ್ಸ್ಟನ್ ಕ್ರಾಮ್ವೆಲ್ 1200 ಬೈಕ್ ಹೊಂದಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಆರ್.ಮಾಧವನ್ ಪಾತ್ರರಾಗಿದ್ದಾರೆ. ಮಾಧವನ್ ಖರೀದಿಸಿರುವ ಬ್ರಿಕ್ಸ್ಟನ್ ಕ್ರಾಮ್ ವೆಲ್ 1200 ಬೈಕಿನ ಬೆಲೆನ ಬೆಲೆ ರೂ. 7.8 ಲಕ್ಷಗಳು.
ಬ್ರಿಕ್ಸ್ಟನ್ ಕ್ರಾಮ್ವೆಲ್ 1200 ಬೈಕ್ ಅನ್ನು ಖರೀದಿಸಿದ ನಂತರ ಆರ್ ಮಾಧವನ್ ಈ ಬೈಕಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
key words: Tamil actor, Madhavan, Brixton Cromwell 1200 bike
Tamil actor Madhavan becomes the first Indian to own a Brixton Cromwell 1200 bike