CWRC ಸಭೆಯಲ್ಲಿ ಮತ್ತೆ ಕಾವೇರಿ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು.

ನವದೆಹಲಿ,ಸೆಪ್ಟಂಬರ್,26,2023(www.justkannada.in): ಕಾವೇರಿ ನದಿ ನೀರು ವಿಚಾರದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿಲೇ ಇರುವ ತಮಿಳುನಾಡು ಇದೀಗ ಮತ್ತೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ಬೇಡಿಕೆ ಇಟ್ಟಿದೆ.

ಕಾವೇರಿ ನೀರು ಹರಿಸಲು ಸಮಿತಿ ನೀಡಿದ್ದ ಆದೇಶದ ಅವಧಿ  ಮುಕ್ತಾಯವಾದ ಹಿನ್ನೆಲೆ  ಇಂದು ಸಭೆ ನಡೆಯುತ್ತಿದೆ. ಸಭೆಯಲ್ಲಿ ವಾದ ಮಂಡಿಸಿರುವ ತಮಿಳುನಾಡು, 15 ದಿನಗಳ ಕಾಲ ಪ್ರತಿ ದಿನ 12,500 ಕ್ಯೂಸೆಕ್ ನಂತೆ ನೀರು  ಹರಿಸಬೇಕು ಎಂದು ಬೇಡಿಕೆ ಇಟ್ಟಿದೆ.

ಜೂನ್ ನಿಂದ ಸೆಪ್ಟಂಬರ್ ವರೆಗೆ ಕರ್ನಾಟಕ 123 ಟಿಎಂಸಿ ನೀರು ಹರಿಸಬೇಕು. ಆದರೆ ಈವರೆಗೆ  40ಟಿಎಂಸಿ ನೀರು ಹರಿಸಿದೆ ಬಾಕಿ 83 ಟಿಎಂಸಿ ನೀರು ಕೂಡಲೇ ಬಿಡುಗಡೆ  ಮಾಡಲು ಆದೇಶಿಸಬೇಕು. ಯಾವುದೇ ಕಾರಣಕ್ಕೂ ನೀರಿನ ಪ್ರಮಾಣ ಕಡಿಮೆ ಮಾಡಬಾರದು ಎಂದು ಬೇಡಿಕೆ ಇಟ್ಟಿದೆ.

Key words: Tamil Nadu- again –demanded- Cauvery water – CWRC -meeting.