2026ರ ತಮಿಳುನಾಡು ಚುನಾವಣೆ;  ಇಪಿಎಸ್ ನಾಯಕತ್ವದಲ್ಲಿ ಬಿಜೆಪಿ, ಎಐಎಡಿಎಂಕೆ ಎದುರಿಸಲಿವೆ – ಅಮಿತ್ ಶಾ

Tamil Nadu elections 2026; BJP, AIADMK will fight under EPS leadership: Amit Shah

 

ನವದೆಹಲಿ, ಏ.೧೧,೨೦೨೫ : ಮುಂಬರುವ 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ “ ಎನ್ಡಿಎ” ಮೈತ್ರಿಕೂಟದ ಭಾಗವಾಗಿ ಎಐಎಡಿಎಂಕೆ ಮತ್ತು ಬಿಜೆಪಿ ಸ್ಪರ್ಧಿಸಲಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ವಿಷಯವನ್ನು ಶುಕ್ರವಾರ ಖಚಿತಪಡಿಸಿದ್ದಾರೆ.

ಈ ವೇಳೆ ಅಮಿತ್‌ ಶಾ ಜತೆಗೆ ಎಐಎಡಿಎಂಕೆಯ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ವೇದಿಕೆಯಲ್ಲಿದ್ದರು.

ಬಿಜೆಪಿ ಮತ್ತು ಎಐಎಡಿಎಂಕೆ ನಾಯಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, “ಈ ಚುನಾವಣೆಯನ್ನು ರಾಷ್ಟ್ರೀಯವಾಗಿ ನರೇಂದ್ರ ಮೋದಿ ಮತ್ತು ತಮಿಳುನಾಡಿನಲ್ಲಿ ಇಪಿಎಸ್ ಮತ್ತು ಎಐಎಡಿಎಂಕೆ ಮುನ್ನಡೆಸಲಿದ್ದಾರೆ” ಎಂದು ಹೇಳಿದರು.

ಎಐಎಡಿಎಂಕೆ 1998 ರಿಂದ ಎನ್ಡಿಎ ಭಾಗವಾಗಿದೆ ಮತ್ತು ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಈ ಹಿಂದೆ ಒಟ್ಟಿಗೆ ಕೆಲಸ ಮಾಡಿದ್ದಾರೆ ಎಂದು ಶಾ ಗಮನಸೆಳೆದರು.

ಅಣ್ಣಾಮಲೈ ಅವರ ಸ್ಥಾನಕ್ಕೆ ನೈನಾರ್ ನಾಗೇಂದ್ರನ್ ಅವರನ್ನು ತಮಿಳುನಾಡಿನ ಹೊಸ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ ದಿನವೇ ಈ ಕ್ರಮ ಕೈಗೊಳ್ಳಲಾಗಿದೆ. ಅವರ ಹೆಸರನ್ನು ಅಣ್ಣಾಮಲೈ ಅವರೇ ಪ್ರಸ್ತಾಪಿಸಿದರು ಎಂಬುದು ವಿಶೇಷ.

key words: Tamil Nadu, elections 2026, BJP, AIADMK, EPS, Amit Shah

Tamil Nadu elections 2026; BJP, AIADMK will fight under EPS leadership: Amit Shah