ಚೆನ್ನೈ,ಡಿಸೆಂಬರ್,23,2020(www.justkannada.in): ಸಂಕ್ರಾಂತಿ ಹಬ್ಬದ ವೇಳೆ ನಡೆಯುವ ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಕೊರೋನಾ ಮಾರ್ಗಸೂಚಿ ಪಾಲನೆ ಮಾಡುವ ಆದೇಶದೊಂದಿಗೆ ಜಲ್ಲಿಕಟ್ಟು ಕ್ರೀಡೆ ನಡೆಸಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ಜಲ್ಲಿಕಟ್ಟು ಕ್ರೀಡೆ ಸ್ಪರ್ಧೆಯಲ್ಲಿ 300 ಮಂದಿ ಮಾತ್ರ ಭಾಗವಹಿಸಬೇಕು. 150ಕ್ಕೂ ಹೆಚ್ಚು ಮಂದಿ ಯನ್ನು ಯರೂತು ವಿದಮ್ ಕಾರ್ಯಕ್ರಮಗಳಲ್ಲಿ ಅನುಮತಿಸಬಾರದು.
ಒಂದು ಬಯಲು ಪ್ರದೇಶದ ಒಟ್ಟು ಸಾಮರ್ಥ್ಯದ ಶೇ.50ರಷ್ಟು ಮಾತ್ರ ಪ್ರೇಕ್ಷಕರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು. ಎಲ್ಲಾ ಪ್ರೇಕ್ಷಕರು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಗಾಗಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹೋರಿ ಮಾಲೀಕರು ಮತ್ತು ಟ್ಯಾಮರುಗಳು Covid-19 ಪರೀಕ್ಷೆಗೆ ಒಳಪಡಬೇಕು ಎಂಬ ಮಾರ್ಗಸೂಚಿಯನ್ನ ಹೊರಡಿಸಿದೆ.
Key words: Tamilnadu Government- Green signal – Jallikattu sport.