ನವದೆಹಲಿ:ಜೂ-17:(www.justkannada.in) ಬಾಲಿವುಡ್ ನಟಿ ತನುಶ್ರೀ ದತ್ತಾ ಮೀ ಟೂ ಅಭಿಯಾನದಡಿ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಮಾದಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ನಾನಾ ಪಾಟೇಕರ್ ಗೆ ಮುಂಬೈ ಪೊಲೀಸರು ಕ್ಲೀನ್ ಚಿಟ್ ನೀಡಿರುವ ಬೆನ್ನಲ್ಲೇ ತೀವ್ರ ಬೇಸರ ವ್ಯಕ್ತಪಡಿಸಿರುವ ತನುಶ್ರೀ ದತ್ತಾ ತನ್ನ ಅಸಹಾಯಕತೆ ಕುರಿತು ಪ್ರಧಾನಿ ಮೋದಿ ಮೊರೆಹೋಗಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ನಟಿ ತನುಶ್ರೀ, ನಟ ನಾನಾ ಪಾಟೇಕರ್ರಿಂದ ಲಂಚವನ್ನು ಪಡೆದು ಪೊಲೀಸರು ಸರಿಯಾಗಿ ತನಿಖೆ ನಡೆಸದೇ ನನ್ನ ಪ್ರಕರಣದ ದಿಕ್ಕನ್ನು ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ನಾನು ದೇಶಕ್ಕಾಗಿಯೇ ಇರುವುದಾಗಿ ಹೇಳುವ ಪ್ರಧಾನಿ ಮೋದಿ ಸದಾ ರಾಮರಾಜ್ಯ ಕಲ್ಪನೆಯ ಬಗ್ಗೆ ಮಾತನಾಡುತ್ತಾರೆ. ಆದರೆ, ದೇಶದ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಅದರ ಬಗ್ಗೆ ತಿಳಿಯದ ನಿಮ್ಮ ನೇತೃತ್ವದಲ್ಲಿ ನಾವು ಮುಂದುವರಿಯಲು ಹೇಗೆ ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮೋದಿ ಜೀ ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಏನಾಯಿತು? ಸರಣಿ ಅಪರಾಧದಿಂದ ನಾನು ಕಿರುಕುಳಕ್ಕೆ ಒಳಗಾಗಿದ್ದೇನೆ. ಸಾರ್ವಜನಿಕರ ನಡುವೆ ಗುಂಪಿನಿಂದ ಹಲ್ಲೆಗೆ ಒಳಗಾಗಿದ್ದೇನೆ. ಪದೇ ಪದೆ ನ್ಯಾಯಯವನ್ನು ನಿರಾಕರಿಸುವ ಮೂಲಕ ನನ್ನ ಹೆಸರಿಗೆ ಕಳಂಕ ತರಲಾಗಿದೆ. ನನ್ನನ್ನು ಬೆದರಿಸಲಾಯಿತು. ಒತ್ತಡ ಹೇರಲಾಯಿತು. ನನ್ನ ವೃತ್ತಿ ಜೀವನವನ್ನು ಹಾಳುಗೆಡುವಲಾಯಿತು. ಕೊನೆಗೆ ಜೀವವನ್ನು ಉಳಿಸಿಕೊಳ್ಳಲು ನಾನು ದೇಶವನ್ನು ಬಿಟ್ಟು ಅನಾಮಧೇಯಳಂತೆ ಬದುಕಿದೆ. ಇದೀಗ ನಿಮ್ಮ ಪೊಲೀಸ್ ಪಡೆ ನಾನು ಕೊಟ್ಟ ದೂರನ್ನು ತಪ್ಪು ಎಂದು ಹೇಳುತ್ತಿದೆ. ಇದೇನಾ ನಿಮ್ಮ ರಾಮರಾಜ್ಯ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಮೀ ಟೂ ಪ್ರಕರಣದಲ್ಲಿ ನಟ ನಾನಾ ಪಾಟೇಕರ್ ಗೆ ಕ್ಲೀನ್ ಚಿಟ್: ಪ್ರಧಾನಿ ಮೋದಿ ಬಳಿ ಅಸಮಾಧಾನದೊಂದಿಗೆ ಅಸಾಹಾಯಕತೆ ಹೇಳಿಕೊಂಡ ನಟಿ ತನುಶ್ರೀ
Tanushree Dutta Questions PM Narendra Modi After Nana Patekar Gets Clean Chit in Sexual Harassment Case
After Mumbai Police gave a clean chit to actor Nana Patekar in the sexual harassment case, actor Tanushree Dutta has released a fresh statement. Accusing police of taking bribe from the actor and not investigating the matter properly, the actor has released a new statement in the media that states that her case was dealt unfairly.