ಮೈಸೂರು,ನ,18,2019(www.justkannada.in): ತನ್ವೀರ್ ಸೇಠ್ ಮೇಲೆ ನಡೆದಿರುವ ಹಲ್ಲೆಯನ್ನ ನಾನು ಖಂಡಿಸುತ್ತೇನೆ. ಕೂಡಲೇ ಸರ್ಕಾರ ಈ ಪ್ರಕರಣ ಸಮಗ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಒತ್ತಾಯಿಸಿದರು.
ಮೈಸೂರಿನಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ತನ್ವೀರ ಸೇಠ್ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿದ ಮಾಜಿ ಸಚಿವ ಸಿಎಂ ಇಬ್ರಾಹಿಂ, ನಾವು ಸ್ಯಾಂಡ್ವಿಚ್ ಮಧ್ಯ ಸಿಕ್ಕಿ ಹೊದ್ದಾಡುತ್ತಿದ್ದೇವೆ. ಸೌಮ್ಯವಾದಿಗಳಿಗೆ ಬೆಲೆ ಇಲ್ಲವಾಗಿದೆ. ತನ್ವೀರ್ ಸೇಠ್ ಶಾಂತ ಸ್ವಭಾವದವನು. ಅಜೀಜ್ ಸೇಠ್ ರವರಂತಹ ಮಾನವೀಯತೆ ವ್ಯಕ್ತಿಯ ಹೊಟೆಯಲ್ಲಿ ಹುಟ್ಟಿದ ಮಗು. ಇವರ ಮೇಲೆ ನಡೆದಿರುವ ಹಲ್ಲೆಯನ್ನ ನಾನು ಖಂಡಿಸುತ್ತೇನೆ ಎಂದರು.
ಗೃಹ ಸಚಿವ ಬಸವರಾಜು ಬೊಮ್ಮಾಯಿ ನನ್ನ ಗೆಳಯ. ಕೂಡಲೆ ಮೈಸೂರಿಗೆ ಬರಬೇಕು. ಬಂದು ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಬೇಕು. ಸಮಗ್ರ ತನಿಖೆಗೆ ಆದೇಶ ಮಾಡಬೇಕು. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡುತ್ತೇನೆ. ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಪ್ರಕರಣದ ಬಗ್ಗೆ ಈಗಾಗಲೇ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನಮಗೂ ಸಾಕಷ್ಟು ಅನುಮಾನವಿದೆ. ತನಿಖೆ ಹಂತದಲ್ಲಿ ಇರುವಾಗ ನಾನು ಬೇರೆ ಏನು ಮಾತನಾಡಲು ಆಗುವುದಿಲ್ಲ. ತನಿಖೆ ಮಾಡಲಿ ನಂತರ ಮಾತನಾಡುತ್ತೇನೆ ಎಂದು ಸಿಎಂ ಇಬ್ರಾಹಿಂ ತಿಳಿಸಿದರು.
Key words: Tanveer Sait- attack-case-CM Ibrahim- insists – investigation