ಮೈಸೂರು,ನ,19,2019(www.justkannada.in): ತನ್ವೀರ್ ಸೇಠ್ ಅವರ ಆರೋಗ್ಯ ಸ್ಥಿತಿ ಸದ್ಯಕ್ಕೆ ಔಟ್ ಆಫ್ ಡೇಂಜರ್. ವೆಂಟಿಲೇಟರ್ ಇಲ್ಲದೆ ಉಸಿರಾಡುತ್ತಿದ್ದಾರೆ. ಸದ್ಯಕ್ಕೆ ಇನ್ಯಾವುದೆ ಶಸ್ತ್ರ ಚಿಕಿತ್ಸೆ ಅಗತ್ಯ ಇಲ್ಲ ಎಂದು ಕೊಲಂಬಿಯ ಏಷ್ಯಾ ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಮುಖ್ಯಸ್ಥ ಡಾ. ಉಪೇಂದ್ರ ಶೆಣೈ, ಮಚ್ಚಿನೇಟು ಕುತ್ತಿಗೆಯ ಬಹಳ ಆಳದವರೆಗೂ ಬಿದ್ದಿದೆ. ಅದನ್ನು ನೋಡಿಯೇ ನಮಗೆ ಆತಂಕ ಹೆಚ್ಚಾಗಿತ್ತು. ಇದೀಗ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದೇವೆ. ಅವರ ಕಿವಿಯ ಕೆಳಭಾಗವು ಸ್ವಲ್ಪ ತುಂಡಾಗಿತ್ತು. ಅದಕ್ಕೆ ಹೊಲಿಗೆ ಹಾಕಿ ಜೋಡಿಸಿದ್ದೇವೆ ಎಂದು ತಿಳಿಸಿದರು.
ತನ್ವೀರ್ ಸೇಠ್ ಅವರನ್ನ ಇವತ್ತು ಹಾಸಿಗೆಯಿಂದ ಎದ್ದೇಳಿಸಿ ಕುರ್ಚಿಯಲ್ಲಿ ಕೂರಿಸಿದ್ದೇವೆ. ವೆಂಟಿಲೇಟರ್ ಇಲ್ಲದೆ ಉಸಿರಾಡುತ್ತಿದ್ದಾರೆ. ಸದ್ಯಕ್ಕೆ ಇನ್ಯಾವುದೇ ಶಸ್ತ್ರ ಚಿಕಿತ್ಸೆ ಅಗತ್ಯ ಇಲ್ಲ. ಅವರ ಸ್ಪಂದನೆ ನೋಡಿಕೊಂಡು ಒಂದೆರಡು ದಿನದಲ್ಲಿ ಐಸಿಯು ನಿಂದ ವಾರ್ಡ್ ಗೆ ಶಿಫ್ಟ್ ಮಾಡುತ್ತೇವೆ. ಇಂದಿನ ಸ್ಥಿತಿಯಲ್ಲಿ ಇನ್ನು ಒಂದುವಾರ ಕಾಲ ಅವರು ಆಸ್ಪತ್ರೆಯಲ್ಲಿ ಇರುತ್ತಾರೆ. ಸದ್ಯ ಅವರಿಗೆ ನಾರ್ಮಲ್ ಫುಡ್ ಕೊಡಲಾಗುತ್ತಿದೆ ಎಂದು ಉಪೇಂದ್ರ ಶೆಣೈ ಹೇಳಿದರು.
Key words: Tanveer Seth -Out of Dange- Columbia Asia Hospital- Upendra Shenoy -Information