ಚಾಮರಾಜನಗರ,ಫೆಬ್ರವರಿ,4,2025 (www.justkannada.in): ಶಾಲಾ ಶೈಕ್ಷಣಿಕ ಪ್ರವಾಸದ ವೇಳೆ ಬಸ್ ಚಾಲನೆ ಮಾಡಿದ ಶಿಕ್ಷಕರೊಬ್ಬರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಡಿಡಿ ರಾಮಚಂದ್ರರಾಜೇ ಅರಸು ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಪ್ರೌಢಶಾಲಾ ಶಿಕ್ಷಕ ವೀರಭದ್ರಸ್ವಾಮಿ ಅಮಾನತಾದವರು. ಪ್ರವಾಸದ ವೇಳೆ ಶಿಕ್ಷಕ ವೀರಭದ್ರಸ್ವಾಮಿ ಬಸ್ ಚಾಲನೆ ಮಾಡಿದ ವೀಡಿಯೋ ವೈರಲ್ ಆಗಿತ್ತು. ಈ ಕುರಿತು ಕದಂಬ ಸೇನಾ ಮುಖಂಡ ಅಂಬರೀಶ್ ಎಂಬುವವರು ಬಿಇಒಗೆ ದೂರು ನೀಡಿದ್ದರು.
ಬಳಿಕ ಬಸ್ ಚಾಲನೆ ಮಾಡಿದ ಶಿಕ್ಷಕ ವೀರಭದ್ರಸ್ವಾಮಿಗೆ ನೋಟೀಸ್ ಜಾರಿ ಮಾಡಲಾಗಿತ್ತು. ವಿಚಾರಣೆ ವೇಳೆ ಮೇಲ್ನೋಟಕ್ಕೆ ಶಿಕ್ಷಕ ಬಸ್ ಚಾಲನೆ ಮಾಡಿರುವುದು ನಿಯಮ ಬಾಹಿರವಾಗಿದ್ದು, ಸೇವಾ ನಡತೆ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಶಿಕ್ಷಕ ವೀರಭದ್ರಸ್ವಾಮಿಯನ್ನ ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಡಿಡಿ ರಾಮಚಂದ್ರರಾಜೇ ಅರಸು ಆದೇಶ ಹೊರಡಿಸಿದ್ದಾರೆ.
Key words: Teacher, suspended, driving, bus