ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸಿ ಮಾರ್ಗದರ್ಶನ ಜೊತೆಗೆ ಶಿಕ್ಷಣ ನೀಡಬೇಕು-ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಸೆಪ್ಟಂಬರ್,5,2022(www.justkannada.in):  ಎಲ್ಲಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ನೀಡುವಾಗ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸಿ ಮಾರ್ಗದರ್ಶನವನ್ನು ನೀಡುವುದರ ಜೊತೆಗೆ ಶಿಕ್ಷಣವನ್ನು ನೀಡಬೇಕಾಗುತ್ತದೆ  ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಭಾರತದ ಶ್ರೇಷ್ಠ ಕವಿ ಹಾಗೂ ಚಿಂತಕರೆನಿಸಿಕೊಂಡಿದ್ದ ರವೀಂದ್ರನಾಥ ಠಾಕೂರರು ಮೈಸೂರಿನಲ್ಲಿ ರಾಧಾಕೃಷ್ಣರವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಮಹಾನ್ ವ್ಯಕ್ತಿಗಳು ಪರಸ್ಪರರನ್ನು ಆಲಿಂಗಿಸಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ದಾಖಲಿಸಿದ್ದಾರೆ. ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಮಹಾನ್ ಘಟನೆಗಳಲ್ಲಿ ಇದೂ ಒಂದು ಎಂದು ಪ್ರೊ.ಜಿ.ಹೇಮಂತ್ ಕುಮಾರ್ ಸ್ಮರಿಸಿದರು.

ರಾಧಾಕೃಷ್ಣನ್ ಅವರು 1962ರಲ್ಲಿ ತಮ್ಮ 41ನೇ ವಯಸ್ಸಿನಲ್ಲಿ ಭಾರತದ ರಾಷ್ಟ್ರಪತಿಯಾಗಿ ಆಯ್ಕೆಗೊಂಡರು. ಆ ವರ್ಷದಿಂದಲೇ ನಾವು ಅವರ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸುತ್ತಾ ಬಂದಿದ್ದೇವೆ. ತಮ್ಮ ಎಲ್ಲ ಜವಾಬ್ದಾರಿಗಳ ನಡುವೆ ರಾಧಾಕೃಷ್ಣನ್  ಅವರು ಶಿಕ್ಷಕರಾಗಿ ಮುಂದುವರಿಯುವುದನ್ನು ಮರೆಯಲಿಲ್ಲ. ಬೈಬಲ್ ಓದುವುದರ ಜೊತೆಗೆ ವಿವೇಕಾನಂದರ ಪ್ರೇರಣೆಯಿಂದ ಬ್ರಹ್ಮಸೂತ್ರ, ಉಪನಿಷತ್ತು, ಭಗವದ್ಗೀತೆ, ಶಂಕರ, ರಾಮಾನುಜ, ಮಧ್ವಾಚಾರ್ಯ – ಇವರ ತತ್ವವನ್ನು ತಿಳಿದುಕೊಂಡರು. ಜೊತೆಗೆ ಹಿಂದೂ, ಬೌದ್ಧ, ಜೈನಧರ್ಮಗಳ ಉಪದೇಶವನ್ನು ಅರಿತುಕೊಂಡರು ಎಂದರು.

ಡಾ. ರಾಧಾಕೃಷ್ಣನ್ ಅವರು ಮೈಸೂರನ್ನು ಬಿಟ್ಟು ಕಲ್ಕತ್ತಾಕ್ಕೆ ಹೋಗುವಾಗ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅವರನ್ನು ಬೀಳ್ಕೊಟ್ಟ ವಿಧಾನ ಮತ್ತು ಸನ್ನಿವೇಶವನ್ನು  ಎ.ಎನ್. ಮೂರ್ತಿರಾಯರು ತಮ್ಮ ಪ್ರಬಂಧ ಒಂದರಲ್ಲಿ ಬಲು ಮನೋಜ್ಞವಾಗಿ ದಾಖಲಿಸಿದ್ದಾರೆ. ಶಿಕ್ಷಕರು ಸಮಾಜದ ಆಧಾರ ಸ್ತಂಭಗಳು, ನಮ್ಮಲ್ಲಿ ಉತ್ತಮವಾದದ್ದನ್ನು ಬೆಳಕಿಗೆ ತರುವಲ್ಲಿ ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ನಮಗೆ ಸ್ಪೂರ್ತಿ ನೀಡುತ್ತಾರೆ. ಶಿಕ್ಷಕರಿಲ್ಲದಿದ್ದರೆ ವಕೀಲರು ಐಟಿ, ವೈದ್ಯರಿಲ್ಲ, ಐಎಎಸ್ ಅಧಿಕಾರಿ ಇಲ್ಲ, ಸಂಶೋಧಕರು ಇಲ್ಲ, ಗಗನಯಾತ್ರಿ ಇಲ್ಲ. ಶಿಕ್ಷಕರು ತೋರಿಸುವ ಹಾದಿ ಬಹುಮುಖ್ಯ ಪಾತ್ರವನ್ನು ಹೊಂದಿರುತ್ತದೆ ಎಂದು ನುಡಿದರು.

ಸಮಾಜಕ್ಕೆ ಒಳಿತು ಉಂಟು ಮಾಡುವ ಮೂಲಕ ಶಿಕ್ಷಕರು ಬದುಕಿನ ಸಾರ್ಥಕತೆ ಕಾಣಬೇಕು-ಡಾ.ಪ್ರತಿಮಾ ಮೂರ್ತಿ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ರೋಗ ಸಂಸ್ಥೆ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಮಾತನಾಡಿ,  ಯಶಸ್ಸು ಎಂಬುದು ರಾತ್ರೋರಾತ್ರಿ ಸಿಗುವುದಿಲ್ಲ. ನಿರಂತರ ಪರಿಶ್ರಮ ಹಾಗೂ ಬದ್ಧತೆ ಇದ್ದರಷ್ಟೇ ಅದು ಲಭಿಸುತ್ತದೆ. ಸಮಾಜಕ್ಕೆ ಒಳಿತು ಉಂಟು ಮಾಡುವ ಮೂಲಕ ಶಿಕ್ಷಕರು ಬದುಕಿನ ಸಾರ್ಥಕತೆ ಕಾಣಬೇಕು ಎಂದು ಕಿವಿಮಾತು ಹೇಳಿದರು.

ನಮ್ಮೆಲ್ಲರಿಗೂ ಮಾನಸಿಕ ಆರೋಗ್ಯ ತುಂಬಾ ಮುಖ್ಯ. ಯಶಸ್ಸು ಎಲ್ಲರಿಗೂ ಬೇಕು. ಈ ಹಾದಿಯಲ್ಲಿ ಮಾನಸಿಕ ಒತ್ತಡ ಸಹಜ. ಇದರ ನಿರ್ವಹಣೆ ತುಂಬಾ ಮುಖ್ಯ. ಗುರಿ ಮುಟ್ಟುವುದಷ್ಟೆ ಯಶಸ್ಸು ಅಲ್ಲ. ಬದುಕಿನ ವಿವಿಧ ಮಜಲುಗಳನ್ನು ನಾವು ಅನುಭವಿಸಬೇಕು. ಸಾಧನೆ ಹಾದಿಯನ್ನು ಒಂದು ವಾಕ್ಯದಲ್ಲಿ ಹೇಳಲು ಸಾಧ್ಯವಿಲ್ಲ. ಇಂದು ಕೇವಲ ದುಡ್ಡೇ ಯಶಸ್ಸು ಅನ್ನೋ ಹಾಗೆ ಆಗಿದೆ. ಮೌಲ್ಯ ಇಲ್ಲದಾಗಿದೆ. ಸಾಧನೆ ಜೊತೆಗೆ ಸಾರ್ಥಕತೆ ತುಂಬಾ ಮುಖ್ಯ. ಅರ್ಥಪೂರ್ಣ ಬದುಕು ನಮ್ಮದಾಗಬೇಕಿದೆ ಎಂದರು.

ಶಿಕ್ಷಣ ಎಲ್ಲರಿಗೂ ತುಂಬಾ ಮುಖ್ಯ. ವಿಲತೆ ಯಶಸ್ಸಿನ ಮೊದಲ ಮೆಟ್ಟಿಲು. ನಮ್ಮ ಬೌದ್ಧಿಕತೆ ಸಮತೋಲನದಲ್ಲಿ ಇರಬೇಕು. ನಿರಂತರ ಪ್ರಯತ್ನದ ಜೊತೆಗೆ ಆಧ್ಯಾತ್ಮಿಕವಾಗಿಯೂ ಕೆಲವೊಮ್ಮೆ ಯೋಚಿಸಬೇಕು. ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಬೇಕು. ವಿಲತೆಗೆ ಅಂಜಬೇಡಿ.  ಗುರಿಯೆಡೆ ನಿರಂತರ ಪ್ರಯತ್ನ ಇರಲಿ. ನಿಮಗೆ ನೀವೆ ಸ್ಫೂರ್ತಿ ಎಂಬುದು ಮರೆಯದಿರಿ. ಜನರೊಂದಿಗೆ ಬೆರೆಯಿರಿ. ಸಂತೋಷವನ್ನು ಇತರರಿಗೂ ಹಂಚಿ ಎಂದರು.

ಸ್ವಾಮಿ ವಿವೇಕಾನಂದ ಹೇಳಿದಂತೆ ಎಲ್ಲಾ ಶಕ್ತಿ ನಿಮ್ಮಲ್ಲಿ ಇದೆ. ಏನಾದರೂ ಸಾಧಿಸು. ಮುಂದಿನ ಪೀಳಿಗರ ನೆನಪಿನಲ್ಲಿ ಇಟ್ಟುಕೊಳ್ಳುವ ಸಾಧನೆ ಮಾಡಿ ಎಂದು ಶುಭ ಹಾರೈಸಿದರು.

ಚಿನ್ಮಯ ಮಿಷನ್ ನ ಆದಿತ್ಯಾನಂದಾಜೀ ಮಾತನಾಡಿದರು. ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಪಿ.ಜ್ಞಾನಪ್ರಕಾಶ್,  ಸಿಂಡಿಕೇಟ್ ಸದಸ್ಯ ಈ.ಸಿ .ನಿಂಗರಾಜ್ ಗೌಡ ಸೇರಿದಂತೆ ಇತರರು ಇದ್ದರು.

ಇದಕ್ಕೂ ಮುನ್ನ ಡಾ.ರಾಧಾಕೃಷ್ಣನ್ ತತ್ತ್ವಶಾಸ್ತ್ರ ಹಾಗೂ ಭಾರತೀಯ ಸಂಸ್ಕೃತಿ ಕೇಂದ್ರದಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

Key words: Teachers – future – students – educate-mysore university- Prof. G. Hemanth Kumar.

ENGLISH SUMMARY…

Teachers should think about the students future and provide guidance along with teaching: Prof. G. Hemanth Kumar
Mysuru, September 5, 2022 (www.justkannada.in): “While teaching, all the teachers should think about the future of the students and provide them guidance,” observed Prof. G. Hemanth Kumar, Vice-Chancellor, University of Mysore.
He participated in the Teachers Day program held at the Vignana Bhavana in the Manasa Gangotri campus today, and offered floral tributes to the portrait of former President of Indian Sarvepalli Radhakrishnan, in whose memory Teachers Day is observed every year. “Ravindranath Tagore, who is known as one of the best poets of India had met Radhakrishnan in Mysore once. According to a few elder people they had embraced each other while they met. This is considered as one of the historic moment concerning the University of Mysore,” he said.
“S. Radhakrishnan became the President of India in 1962, when he was 41-years-old. We are observing the Teachers Day in his memory from 1962 itself. Despite all his duties, Radhakrishnan didn’t forget his duties as a teacher. Along with the Bible, he studied the Brahmasutra, Upanishads, Bhagawadgeetha, Shankara, Ramanuja, Madhwacharya’s texts and understood their principles. He also was well aware about the preaching of Hindu, Buddhism and Jain religions,” he explained.
Sri Adithyanandaji of the Chinmaya Mission was present. He also addressed the gathering, Prof. R. Shivappa, Registrar, University of Mysore, Prof. A.P. Jnanprakash, Registrar (Exams), Syndicate member E.C. Ningaraj Gowda and others were present.
Keywords: Teachers Day/ University of Mysore/ Prof. G. Hemanth Kumar/ Sarvepalli Radhakrishnan