ಮೈಸೂರು, ಫೆ.೦೬, ೨೦೨೫ : ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮ ಫೆಬ್ರವರಿ 10ನೇ ತಾರೀಖಿನೊಳಗೆ ಮಾಡಬೇಕಾಗಿದೆ. ಈ ಕಾರ್ಯಕ್ರಮದ ಆಯೋಜನೆಗೆ ಪ್ರತಿ ಕ್ಲಸ್ಟರ್ ಗೆ 25,000 ₹ ಹಣ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದ್ದು. ಸದ್ಯದಲ್ಲಿ ಅದು BEO ರವರ ಖಾತೆಯಲ್ಲಿದೆ. k2 ಬಿಲ್ ಇರುವುದರಿಂದ BEO ಮೂಲಕ CRP ಗಳ ಖಾತೆಗೆ ಹಣ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ಸಂಬಂಧ ಪಟ್ಟ ಅಂಗಡಿಗಳಿಗೆ CSS ಪೋರ್ಟಲ್ ಮೂಲಕ ಹಣ ಮಾಡುತ್ತೇವೆಂದು ವೆಂಡರ್ ID ಕ್ರಿಯೇಟ್ ಮಾಡಲು ಅಂಗಡಿಗಳ ಖಾತೆ ಸಂಖ್ಯೆ ಪಡೆದುಕೊಂಡು ಬರಲು ಆದೇಶಿಸಿರುತ್ತಾರೆ.
ಕಾರ್ಯಕ್ರಮದ ಆಯೋಜನೆಗೆ ಸ್ಟೇಷನರಿ ಸಾಮಾನುಗಳು , ಊಟದ ವ್ಯವಸ್ಥೆ , ತರಕಾರಿ , ಸರ್ಟಿಫಿಕೇಟ್ , ಬಹುಮಾನ , ಶಾಮಿಯಾನ ಹೀಗೆ ಹತ್ತು ಹಲವಾರು ವ್ಯವಸ್ಥೆಗಳು ಆಗಬೇಕಾಗಿದೆ. ಇಂತಹ ಸಂದರ್ಭದಲ್ಲಿ ಹಣ ಹೋದ ನಂತರ ಅಂಗಡಿಯವರಿಂದ ಪಡೆಯಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಹಾಗಾಗಿ ಸಿಆರ್ಪಿಗಳೇ ತಮ್ಮ ಸ್ವಂತ ಹಣದಿಂದ ಮೊದಲು ಎಲ್ಲವನ್ನೂ ಖರೀದಿಸಿ ಬಿಲ್ಲು ಪಡೆಯಬೇಕಾಗಿದೆ ಅದಲ್ಲದೆ . GST 18% ಇರುತ್ತದೆ ಇಷ್ಟೊಂದು ಒತ್ತಡಗಳ ನಡುವೆ ಕಾರ್ಯಕ್ರಮವನ್ನು ಆಯೋಜನೆ ಮಾಡಲು ಇಲಾಖೆ ನಿರ್ಧರಿಸಿದೆ.
ಹಣವೇ ಖಾತೆಗೆ ಬಿಡುಗಡೆಯಾಗದೆ ಪ್ರತಿಯೊಂದು ವಸ್ತುವನ್ನು ಸಾಲದ ರೂಪದಲ್ಲಿ ಪಡೆಯಬೇಕಾದ ಸಂದರ್ಭ ಬಂದಿದ್ದು ಈ ರೀತಿ ಸಾಲ ಪಡೆಯುವಾಗ GST ಜೊತೆಗೆ ಅಂಗಡಿಯವರಿಗೆ ಕಮಿಷನ್ ಸಹ ನೀಡಬೇಕಿದೆ . ಈ ಗೊಂದಲಗಳ ಜೊತೆ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾದರೂ ಹೇಗಾಗುತ್ತದೆ ಎಂಬುದು ಶಿಕ್ಷಕರ ಅಳಲು.
ಶಾಲಾ ವ್ಯವಸ್ಥೆಯಲ್ಲಿ ಅಕ್ರಮ ಅನ್ಯಾಯಗಳ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಾದರೆ ಇದನ್ನು ನೋಡುವ ಅರಿಯುವ ಮಕ್ಕಳ ಮನಸ್ಸಿನಲ್ಲಿ ಪ್ರಾಮಾಣಿಕತೆ ಬಗ್ಗೆ ಉಂಟಾಗುವ ದುಷ್ಪರಿಣಾಮಗಳನ್ನ ಮುಂದಿನ ಸಮಾಜ ಹೇಗೆ ನಿವಾರಿಸಿಕೊಳ್ಳಬೇಕಾಗುತ್ತದೆ.
ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕೂಡಲೇ ಕಾರ್ಯಕ್ರಮದ ಹಣ ನೇರ ಜಮಾ ಮಾಡುವ ಮೂಲಕ ಕಲಿಕಾ ಹಬ್ಬದ ಕಾರ್ಯಕ್ರಮ ಸರಳೀಕರಣ ಮಾಡಿ ಅದೇಶ ಹೊರಡಿಸಬೇಕೆಂದು ಒತ್ತಾಯ.
- ಅರವಿಂದ್ ಶರ್ಮ , ಸಾಮಾಜಿಕ ಚಳವಳಿಗಾರರು, ಮೈಸೂರು.
key words: “Learning Festival”, Teachers, GST bill, Mysore