ಬೆಂಗಳೂರು,ಸೆಪ್ಟಂಬರ್,20,2022(www.justkannada.in): 2015-16ರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಪರೀಕ್ಷೆ ಬರೆಯದವರೂ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ತನಿಖೆಯಿಂದ ಹಗರಣ ಬಯಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಆರೋಪಿಸಿದರು.
ಶಿಕ್ಷಕರ ನೇಮಕಾತಿ ಹಗರಣ ಕುರಿತು ಇಂದು ಸದನದಲ್ಲಿ ಚರ್ಚೆಯಾಯಿತು. ಸದನದಲ್ಲಿ ಮಾತನಾಡಿದ ಸಚಿವ ಬಿ.ಸಿ ನಾಗೇಶ್, 2012-13 ರಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಿತು. ಅಂದು 689 ಶಿಕ್ಷಕರ ನೇಮಕ ಆಯಿತು. 2015-16ರಲ್ಲಿ ಪರೀಕ್ಷೆ ಬರೆಯದವರು ಆಯ್ಕೆಯಾಗಿದ್ದಾರೆ. ತನಿಖೆ ನಡೆಸಿದಾಗ ಹಗರಣ ಬಯಲಾಯಿತು ಪರೀಕ್ಷೆ ಬರೆಯದಿದ್ದರೂ 16 ಮಂದಿ ಆಯ್ಕೆಯಾದರು. ಶಿಕ್ಷಕರ ನೇಮಕಾತಿ ಸಂಬಂಧ ಸಿಐಡಿ ತನಿಖೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಹಗರಣ ನಡೆದಿದೆ ಎಂದು ಹೇಳಿದರು.
ಈ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಶಾಸಕ ನಡಹಳ್ಳಿ ಕೋರಿದರು. ಆದರೆ ಶಿಕ್ಷಕರ ನೇಮಕಾತಿ ಬಗ್ಗೆ ಚರ್ಚೆ ಅಗತ್ಯವಿಲ್ಲ. ತನಿಖಾ ವರದಿ ಬಂದ ಮೇಲೆ ನೋಡೋಣ ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.
Key words: teachers – Illegal -recruitment – Minister -BC Nagesh