ಬೆಂಗಳೂರು,ಅಕ್ಟೋಬರ್,09,2020(www.justkannada.in) : ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ತೆರೆಯಲು ಸರ್ಕಾರ ತೆರೆಮರೆಯ ಕಸರತ್ತು ನಡೆಸಿರುವ ಬೆನ್ನಲ್ಲೇ ಹೆಮ್ಮಾರಿ ಕೊರೊನಾಗೆ ಶಿಕ್ಷಕರ ಸರಣಿ ಸಾವಿನ ಲೆಕ್ಕ ಆಘಾತ ಮೂಡಿಸಿದೆ.
ರಾಜ್ಯಕ್ಕೆ ಕೊರೊನಾ ಕಾಲಿಟ್ಟ ನಂತರ ಶಿಕ್ಷಕರ ಸಾವಿನ ಸರಣಿ ಮುಂದುವರೆದಿದ್ದು, ಈವರೆಗೆ ಸುಮಾರು 110ಕ್ಕೂ ಹೆಚ್ಚು ಶಿಕ್ಷಕರು ಬಲಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಅದರಲ್ಲೂ, ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಆರಂಭಿಸಿದ ವಿದ್ಯಾಗಮ ಯೋಜನೆ ನಂತರ ಹಲವು ಮಂದಿ ಶಿಕ್ಷಕರು ಕೊರೊನಾಗೆ ಬಲಿಯಾಗಿರುವುದು ಆತಂಕಕಾರಿ ವಿಷಯವಾಗಿದೆ.
ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಬಹುದು ಎಂಬ ಅಭಿಪ್ರಾಯ ಮೂಡಿಸುವ ಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಈ ಗುಮಾನಿಯ ನಡುವೆ ಶಿಕ್ಷಕರ ಸರಣಿ ಸಾವಿನ ಲೆಕ್ಕ ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯವನ್ನು ಎತ್ತಿಹಿಡಿದಿದೆ.
ಬೆಳಗಾವಿ ಜಿಲ್ಲೆಯಲ್ಲೇ ಅತಿ ಹೆಚ್ಚು ಶಿಕ್ಷಕರು ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಶಿಕ್ಷಕರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಇವರಲ್ಲಿ 58 ಮಂದಿ ಶಿಕ್ಷಕರು ಬಲಿಯಾಗಿದ್ದಾರೆ. ವಿದ್ಯಾಗಮ ಯೋಜನೆ ಆರಂಭವಾದ ಬಳಿಕ 18 ಶಿಕ್ಷಕರ ಪೈಕಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 17 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಇನ್ನೆಷ್ಟು ಶಿಕ್ಷಕರ ಹೆಣ ಬೀಳಬೇಕು ಎಂಬ ಪ್ರಶ್ನೆ ಜನತೆ ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ.
ಕೊರೊನಾಗೆ ನೂರಾರು ಶಿಕ್ಷಕರ ಹೆಣ, ಜಿಲ್ಲಾವಾರು ಅಂದಾಜು ಲೆಕ್ಕ
ಬೆಳಗಾವಿ: 58, ವಿದ್ಯಾಗಮ-18, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ-17, ವಿದ್ಯಾಗಮ-03, ಹಾವೇರಿ-18, ವಿದ್ಯಾಗಮ-08, ಕೊಪ್ಪಳ-ವಿದ್ಯಾಗಮ 11, ಬಾಗಲಕೋಟೆ-23 , ವಿದ್ಯಾಗಮ -06, ದಾವಣೆಗೆರೆ-05, ಚನ್ನಗಿರಿ-04, ರಾಯಚೂರು-15, ಚಿತ್ರದುರ್ಗ-10, ಬಳ್ಳಾರಿ-10, ವಿದ್ಯಾಗಮ-08 , ಚಿಕ್ಕಮಗಳೂರು-05, ಬಾಗಲಕೋಟೆ-23, ವಿದ್ಯಾಗಮ-06 , ಗದಗ-04, ಹಾಸನ-06, ಉಡುಪಿ-01 ಸಾವು, ಚಾಮರಾಜನರ-01 ಸಾವು, ಶಿವಮೊಗ್ಗ-8 ಸಾವು ಎಂದು ಮಾಹಿತಿ ತಿಳಿದು ಬಂದಿದೆ.
ಮೈಸೂರಿನಲ್ಲಿ ಬರೋಬ್ಬರಿ 198 ಶಿಕ್ಷಕರಿಗೆ ಕೊರೊನಾ.
ಪ್ರಸ್ತುತ 77 ಮಂದಿಗೆ ಸೋಂಕಿನಿಂದ ಬಳಲುತ್ತಿದ್ದು, ಕೊರೊನಾಗೆ 3 ಶಿಕ್ಷಕರು ಬಲಿಯಾಗಿದ್ದಾರೆ. ಮೈಸೂರು ಉತ್ತರ 17, ಮೈಸೂರು ದಕ್ಷಿಣ15 (5ಆಕ್ಟಿವ್) (2 ಡೆತ್). ಮೈಸೂರು ಗ್ರಾಮಾಂತರ 36(21 ಆಕ್ಟೀವ್) (1 ಡೆತ್). ಕೆ.ಆರ್ ನಗರ 18,ಪಿರಿಯಾಪಟ್ಟಣ 26 (4ಆಕ್ಟೀವ್),ಹುಣಸೂರು23 (13ಆಕ್ಟೀವ್), ನಂಜನಗೂಡು16 (13ಆಕ್ಟೀವ್), ಹೆಚ್.ಡಿ.ಕೋಟೆ 35 (9ಆಕ್ಟಿವ್), ತಿ.ನರಸೀಪುರ 12 (12ಆಕ್ಟಿವ್) ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ಮೈಸೂರು ಡಿಡಿಪಿಐ ಪಾಂಡುರಂಗ ತಿಳಿಸಿದರು.
key words : Teachers-death-chain …!