ಬೆಂಗಳೂರು, ಫೆಬ್ರವರಿ 20, 2020 (www.justkannada.in): 3 ವರ್ಷದ ಬಳಿಕ ನನ್ನ ಮೇಲಿನ ಜವಾಬ್ದಾರಿಗಳಲ್ಲಿ ಒಂದನ್ನು ಕೈ ಬಿಡುವ ಬಗ್ಗೆ ಯೋಚಿಸುವ ಸಾಧ್ಯತೆ ಇದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
ಹೆಚ್ಚುಕಮ್ಮಿ ಕಳೆದ 8 ವರ್ಷಗಳಿಂದ ಪ್ರಾಕ್ಟೀಸ್ ಸೆಷನ್ ಹಾಗೂ ಟ್ರಾವೆಲಿಂಗ್ ಸೇರಿದಂತೆ ವರ್ಷಕ್ಕೆ 300 ದಿನ ಕ್ರಿಕೆಟ್ನಲ್ಲಿ ಕಳೆಯುತ್ತಿದ್ದೇನೆ. ಎಲ್ಲಿಯೂ ನನ್ನ ಕ್ಷಮತೆ ಹಾಗೂ ಬದ್ಧತೆ ಈ ನಿಟ್ಟಿನಲ್ಲಿ ಕಡಿಮೆಯಾಗಿಲ್ಲ. ಆದರೆ ಹೀಗೆ ಇರುತ್ತದೆ ಎನ್ನುವುದಕ್ಕೂ ಆಗುವುದಿಲ್ಲ ಎಂದಿದ್ದಾರೆ ಕೊಹ್ಲಿ.
3 ಫಾರ್ಮೆಟ್ನ ಆಟದಲ್ಲೂ ತಾವು ಫಿಟ್ ಆಗಿದ್ದೇನೆ. ತಮಗೆ 34 ಅಥವಾ 35 ವರ್ಷವಾದಾಗ, ನನ್ನ ದೇಹ ನನ್ನ ಆಟಕ್ಕೆ ಸಹಕರಿಸುವುದಕ್ಕೆ ನಿರಾಕರಿಸಬಹುದು. ಆ ಸಂದರ್ಭದಲ್ಲಿ ನನ್ನ ಅಭಿಪ್ರಾಯ ಬೇರೆಯದ್ದೆ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.