ಬೆಂಗಳೂರು, ಸೆಪ್ಟೆಂಬರ್ 18, 2022 (www.justkannada.in): ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ಕಬ್ಜ’ ಸಿನಿಮಾ ಟೀಸರ್ ಗಮನ ಸೆಳೆದಿದೆ.
ಆರ್ ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆ ಆಗಿದ್ದು, ಟೀಸರ್ನಲ್ಲಿ ‘ಕೆಜಿಎಫ್’ ಸಿನಿಮಾದ ಛಾಯೆ ದಟ್ಟವಾಗಿ ಕಾಣುತ್ತಿದೆ. ಭಾರತೀಯ ಸಿನಿಮಾದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆ ಇದೆ.
‘ಕಬ್ಜ’ ಸಿನಿಮಾದ ಟೀಸರ್ ಪ್ರೆಸೆಂಟೇಶನ್ ಸಹ ‘ಕೆಜಿಎಫ್ 2’ ಸಿನಿಮಾದ ಟ್ರೈಲರ್ ಪ್ರೆಸೆಂಟೇಶನ್ ಮಾದರಿಯಲ್ಲಿಯೇ ಇದೆ.
‘ಕೆಜಿಎಫ್’ ಹಾಗೂ ‘ಕಬ್ಜ’ ನಡುವೆ ಇರುವ ಸಾಮ್ಯತೆಯ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.
ಟೀಸರ್ನಲ್ಲಿ ಉಪೇಂದ್ರ ಬಾಯಲ್ಲಿ ಸಿಗಾರ್ ಇಟ್ಟುಕೊಂಡು ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಸಹ ಟೀಸರ್ ಅಂತ್ಯದಲ್ಲಿ ಕಾಣಿಸಿಕೊಂಡಿದ್ದಾರೆ.