ಹೈದರಾಬಾದ್, ಮೇ 06, 2020 (www.justkannada.in): ಲಾಕ್‌ಡೌನ್‌ನ್ನು ಮೇ 29ರ ತನಕವೂ ವಿಸ್ತರಿಸಲು ತೆಲಂಗಾಣ ರಾಜ್ಯ ಸರಕಾರ ನಿರ್ಧರಿಸಿದೆ.
ಜನತೆ ಲಾಕ್‌ಡೌನ್ ವಿಸ್ತರಣೆಯಾಗುವುದನ್ನು ಬಯಸುತ್ತಿದ್ದಾರೆ. ನಮ್ಮ ನಿರ್ಧಾರದ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದ್ದೇನೆ ಎಂದು ಸಂಪುಟ ಸಭೆಯ ಬಳಿಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ತಿಳಿಸಿದ್ದಾರೆ.
ತೆಲಂಗಾಣದ ರಾಜ್ಯದ ಆರು ಜಿಲ್ಲೆಗಳು ರೆಡ್ ವಲಯದಲ್ಲಿವೆ. 18 ಜಿಲ್ಲೆಗಳು ಆರೆಂಜ್ ಹಾಗೂ 9 ಜಿಲ್ಲೆಗಳು ಗ್ರೀನ್ ವಲಯದಲ್ಲಿವೆ. ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಸೋಂಕು ವರದಿಯಾಗಿದೆ. ಜಿಎಚ್‌ಎಂಸಿ, ರಂಗ ರೆಡ್ಡಿ ಹಾಗೂ ಮೆದ್‌ಚಾಲ್ ಜಿಲ್ಲೆಗಳಲ್ಲಿನ ಪರಿಸ್ಥಿತಿ ಕೆಟ್ಟದ್ದಾಗಿದೆ ಎಂದು ರಾವ್ ತಿಳಿಸಿದ್ದಾರೆ.
ರೆಡ್ ವಲಯದಲ್ಲೂ ಅಂಗಡಿಗಳನ್ನು ತೆರೆಯಬಹುದು ಎಂದು ಕೇಂದ್ರ ಸರಕಾರ ತಿಳಿಸಿದೆ. ನಾವು ಹೈದರಾಬಾದ್, ಮೆಡ್‌ಚಾಲ್, ಸೂರ್ಯಪೇಟ್, ವಿಕಾರಬಾದ್‌ನಲ್ಲಿ ಅಂಗಡಿಯನ್ನು ತೆರೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.