ಮಂಡ್ಯ, ಸೆಪ್ಟೆಂಬರ್, 11,2020(www.justkannada.in) : ಮಂಡ್ಯದ ಅರ್ಕೇಶ್ವರ ದೇವಾಲಯಕ್ಕೆ ಕನ್ನ ಹಾಕಿದ ದರೋಡೆಕೋರರು ಅಲ್ಲಿ ಮಲಗಿದ್ದ ಅರ್ಚಕ, ಸೆಕ್ಯೂರಿಟಿ ಸೇರಿ ಮೂವರನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮಂಡ್ಯದ ಅತಿ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಗುತ್ತಲು ಅರ್ಕೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಮೂವರನ್ನು ಕಗ್ಗೊಲೆ ಮಾಡಿ ಹಣದ ಹುಂಡಿಯನ್ನು ದೋಚಲಾಗಿದೆ.
ದರೋಡೆಕೋರರು ದೇವಾಲಯಕ್ಕೆ ನುಗ್ಗಿ ದೇವಾಲಯದ ಹುಂಡಿಯನ್ನು ಹೊತ್ತೊಯ್ಯುವ ಸಂದರ್ಭದಲ್ಲಿ ಅರ್ಚಕ ಹಾಗೂ ಕಾವಲುಗಾರರಾದ ಗಣೇಶ, ಪ್ರಕಾಶ, ಆನಂದ ಮೂವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಬಳಿಕ ದರೋಡೆಕೋರರು ದೇವಾಲಯದ ಹುಂಡಿ ಹೊತ್ತೊಯ್ದು ದೇವಾಲಯದ ಹೊರಗೆ ಬಿಸಾಡಿ ಪರಾರಿಯಾಗಿದ್ದಾರೆ.
ಈ ಕುರಿತು ಮಂಡ್ಯ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
key words : temple-robbery-High-priest-guards-assassinated-gangsters