ಮೈಸೂರಿನಲ್ಲಿ ದೇವಾಲಯ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್.

ಮೈಸೂರು,ಸೆಪ್ಟಂಬರ್,14,2021(www.justkannada.in): ಮೈಸೂರಿನಲ್ಲಿ ದೇವಾಲಯ ತೆರವು ಕಾರ್ಯಚರಣೆಕ್ಕೆ ತಾತ್ಕಾಲಿಕ ಬ್ರೇಕ್  ಬಿದ್ದಿದೆ. ಹೌದು ಮೈಸೂರಿನಲ್ಲಿ ದೇವಾಲಯಗಳ ತೆರವು ಕಾರ್ಯಾಚರಣೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್, ಮೈಸೂರಿನಲ್ಲಿ ದೇವಸ್ಥಾನ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ವಿವರಣೆ ಕೇಳಿ ಸರ್ಕಾರದಿಂದ  ನೋಟಿಸ್ ಬಂದಿದೆ. ಅದಕ್ಕೆ‌ ಉತ್ತರವನ್ನು ಕೊಡುತ್ತೇವೆ. ಸರ್ಕಾರದ‌ ಅಧಿಕೃತ ನೋಟಿಸ್ ಆಗಿದೆ. ನೋಟಿಸ್ ನಲ್ಲಿ ಏನಿದೆ ಎಂಬುದನ್ನು‌ ನಾನು ಹೇಳಲು ಸಾಧ್ಯವಿಲ್ಲ.ಆದರೆ ಸರ್ಕಾರಕ್ಕೆ‌ ಸಂಪೂರ್ಣ ವಿವರ ನೀಡುತ್ತೇವೆ ಎಂದರು.

ಕಾರ್ಯಚರಣೆ ನಿಲ್ಲಿಸುವ ಸಂಬಂಧದ ಪ್ರಶ್ನೆಗೆ ಉತ್ತರಿಸಿದ ಡಿಸಿ ಬಗಾದಿ ಗೌತಮ್, ಸರ್ಕಾರದ ನಿರ್ದೇಶನಕ್ಕಾಗಿ ನಾವು ಕಾಯುತ್ತಿದ್ದೇವೆ. ಸರ್ಕಾರದ ಉತ್ತರ ಬರುವವರೆಗೂ  ಸದ್ಯಕ್ಕೆ ಕಾರ್ಯಚರಣೆ ಇರುವುದಿಲ್ಲ. ಸರ್ಕಾರದ‌ ಮುಂದಿನ‌ ನಿರ್ದೇಶನದವರೆಗೂ ಎಲ್ಲವು ಯಥಾಸ್ಥಿತಿಯಲ್ಲಿ ಇರುತ್ತದೆ ಎಂದು ತಿಳಿಸಿದ್ದಾರೆ.

ENGLISH SUMMARY….

Temporary brake for eviction of temple in Mysuru
Mysuru, September 14, 2021 (www.justkannada.in): As per the orders of the District Administration, the process of eviction of the temple in Mysuru has been stopped temporarily.
Providing this information in Mysutu today Deputy Commissioner Bagadi Gowtham said that the District Administration has received a notice regarding eviction of the temple in Mysuru and the District Administration will reply to it shortly. “As it is government notice I cannot reveal more than this in front of the media. However, we will provide complete details to the government,” he informed.
In his reply to the question on stopping the demolition works, he informed that they are waiting for government orders. “However there will be no further works in this connection till we receive the government orders. We will maintain the status quo till further government orders,” he added.
Keywords: Mysuru/ temple/ demolition/ temporary brake/ DC/ government order

Key words: Temporary -break – temple –clearance- operation – Mysore