ಬೆಂಗಳೂರು,ಫೆಬ್ರವರಿ,15,2023(www.justkannada.in): ಸರ್ಕಾರದಿಂದ ಟೆಂಡರ್ ಗೋಲ್ಮಾಲ್ ನಡೆದಿದೆ. ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದ್ದು ಇದಕ್ಕೆ ಸಿಎಂ ಬೊಮ್ಮಾಯಿ ಕಾರಣ. ಟೆಂಡರ್ ಗೆ ಹಣ ನೀಗದಿಪಡಿಸಲು ಸಿಎಂ ಸೂಚಿಸಿದ್ದಾರೆ. ಕಮಿಷನ್ ಕೊಟ್ಟವರಿಗೆ ಟೆಂಡರ್ ನೀಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸರ್ಕಾರದಿಂದ ಒಂದೇ ದಿನ 18 ಸಾವಿರ ಕೋಟಿ ರೂ ಟೆಂಡರ್ ಆಗಿದೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಇಲ್ಲಿಗೇ ಬಿಡದೇ ಕೋರ್ಟ್ ಮೊರೆ ಹೋಗುತ್ತೇವೆ.ಚುನಾವಣೆಯಲ್ಲಿ ತನಿಖಾ ಸಮಿತಿ ರಚನೆ ಮಾಡಿ ಹಗರಣ ಬಯಲಿಗೆಳೆಯುತ್ತೇವೆ. ಯಾರ ಮೇಲಾದರೂ ಆರೋಪ ಇದ್ದರೂ ಎಲ್ಲವನ್ನೂ ತನಿಖೆಗೆ ನೀಡುತ್ತೇವೆ ಎಂದರು.
ಇದೆಲ್ಲವೂ ಎಲೆಕ್ಷನ್ ಫಂಡ್ ರೇಸ್ ಆಗಿದೆ. ಚುನಾವಣೆಗೆ 6 ಸಾವಿರ ಕೋಟಿ ರೂ ಕೊಡುತ್ತೇವೆ ಎಂದು ಹೇಳ್ತಾರೆ. ಇಷ್ಟರಮಟ್ಟಿಗೆ ರಾಜ್ಯವನ್ನು ಹಾಳುಮಾಡಲು ಹೊರಟಿದ್ದಾರೆ. ರಾಜ್ಯ ಸರ್ಕಾರ ಬೊಕ್ಕಸವನ್ನ ಲೂಟಿ ಮಾಡುತ್ತಿದೆ ಚುನಾವಣೆಗೆ ಮಂತ್ರಿಗಳು ದುಡ್ಡು ಮಾಡಿಕೊಡಲು ಟೆಂಡರ್ ಕರೆದಿದ್ದಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
Key words: Tender-Golmaal – Govt-Siddaramaiah -alleges -CM Bommai