ಮೈಸೂರು,ಮಾ,12,2020(www.justkannada.in) ಮೈಸೂರಿನ ಉತ್ತನಹಳ್ಳಿಯಲ್ಲಿರುವ ಜ್ವಾಲಾಮುಖಿ ದೇವಸ್ಥಾನದಲ್ಲಿ ಪೂಜಾ ಸಮಾಗ್ರಿಗಳ ಅಂಗಡಿಗಳಿಗೆ ಟೆಂಡರ್ ಮಾಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.
ಚಾಮುಂಡೇಶ್ವರಿ ದೇವಾಲಯ, ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನ ಮುಂತಾದ ಕಡೆಗಳಲ್ಲಿ ಟೆಂಡರ್ ಇಲ್ಲ ಆದ್ರೆ ಉತ್ತನಹಳ್ಳಿಯ ಜ್ವಾಲಾಮುಖಿ ದೇವಸ್ಥಾನದಲ್ಲಿ ಮಾತ್ರ ಟೆಂಡರ್ ನೀಡಲಾಗಿದೆ. ಪೂಜಾ ಸಾಮಗ್ರಗಳ ಅಂಗಡಿಗಳಿಗೆ ಟೆಂಡರ್ ಮಾಡಿರುವುದು ನಮಗೂ ಹೊರೆ, ಭಕ್ತರಿಗೂ ಹೊರೆಯಾಗಿದೆ ಹೀಗಾಗಿ ಕೂಡಲೇ ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ದೇಶ,ವಿದೇಶಗಳಿಂದ ಚಾಮುಂಡಿ ಬೆಟ್ಟಕ್ಕೆ ಜನ ಬರ್ತಾರೆ. ಅಂತಾ ಸ್ಥಳದಲ್ಲಿ ಪೂಜಾ ಸಾಮಗ್ರಿಗಳ ವ್ಯಾಪಾರಕ್ಕೆ ಯಾವುದೇ ಟೆಂಡರ್ ಇಲ್ಲ. ಆದ್ರೆ ಜ್ವಾಲಾಮುಖಿ ದೇವಸ್ಥಾನಕ್ಕೆ ಬಹುತೇಕ ಗ್ರಾಮೀಣಾ ಭಾಗದ ಭಕ್ತರೇ ಬರುತ್ತಾರೆ. ಉತ್ತನಹಳ್ಳಿ ಮಾರಮ್ಮ ದೇವಸ್ಥಾನದಲ್ಲಿ ಮಾತ್ರ ಪೂಜಾ ಸಾಮಾಗ್ರಗಳ ಮಾರಾಟಕ್ಕೆ ಟೆಂಡರ್ ಮಾಡಿರುವುದು ಯಾವ ನ್ಯಾಯ.? ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಚಾಮುಂಡಿ ಬೆಟ್ಟದಂತೆ ಇಲ್ಲಿಯೂ ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ಎಷ್ಟು ಬಾರಿ ಮನವಿ ಮಾಡಿದರೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಟೆಂಡರ್ ನಿಂದಾಗಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚು ಮಾಡಿರೋದ್ರಿಂದ, ಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನ ಕೊಂಡುಕೊಳ್ಳುತ್ತಿಲ್ಲ. ಅಲ್ಲದೇ ಇಲ್ಲೆಗೆ ಭಕ್ತರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಕೂಡಲೇ ಟೆಂಡರ್ ಪದ್ದತಿ ಕೈಬಿಟ್ಟು ಮುಕ್ತವಾಗಿ ವ್ಯಾಪಾರ ಮಾಡಲು ವ್ಯವಸ್ಥೆ ಮಾಡಿಕೊಡಿ. ಇದರಿಂದ ಗ್ರಾಮದಲ್ಲಿ ಆರೆಳು ಕುಟುಂಬಕ್ಕೆ ನಿರುದ್ಯೋಗ ಸಮಸ್ಯೆ ನಿವಾರಿಸುತ್ತೆ ಎಂದು ಉತ್ತನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Key words: Tender – Sale – Pooja Materials-mysore- jwalamuki temple