ಲಂಡನ್, ಜೂನ್ 25, 2019 (www.justkannada.in): ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿರುವ ಜರ್ಮನಿಯ ಟೆನಿಸ್ ತಾರೆ ಬೋರಿಸ್ ಬೆಕರ್‌ಗೆ ಅದನ್ನು ತೀರಿಸಲು ಈಗ ಟ್ರೋಫಿ, ಸ್ಮರಣಿಕೆಗಳನ್ನು ಹರಾಜಿಗೆ ಹಾಕುವ ಪರಿಸ್ಥಿತಿ ಎದುರಾಗಿದೆ.
ಬ್ರಿಟನಿನ ‘ವೈಲ್ಸ್ ಹಾರ್ಡಿ’ ಸೋಮವಾರದಿಂದ ಆನ್‌ಲೈನ್‌ನಲ್ಲಿ ಹರಾಜು ಆರಂಭಿಸಲಿದೆ. ವಿಂಬಲ್ಡನ್ ಇತಿಹಾಸದಲ್ಲೇ ಅತ್ಯಂತ ಕಿರಿಯ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬೆಕರ್, ಮೂರು ಪ್ರಶಸ್ತಿ ಗಳಲ್ಲಿ ಮೊದಲನೆಯದನ್ನು 17ನೇ ವಯಸ್ಸಿನಲ್ಲೇ ಗೆದ್ದುಕೊಂಡಿದ್ದರು.
ವಿಪರೀತ ಸಾಲದ ಕಾರಣಕ್ಕೆ 51 ವರ್ಷದ ಬೆಕರ್ ಅವರನ್ನು 2017ರಲ್ಲಿ ದಿವಾಳಿ ಎಂದು ಘೋಷಿಸಲಾಗಿತ್ತು.
ಪದಕಗಳು, ಟ್ರೋಫಿಗಳು, ಕಪ್‌ಗಳು, ಛಾಯಾಚಿತ್ರಗಳು ಸೇರಿ ದಂತೆ 82 ವಸ್ತುಗಳನ್ನು ಹರಾಜು ಹಾಕಲಾಗುವುದು. ಹರಾಜು ಜುಲೈ 11ರವರೆಗೆ ನಡೆಯಲಿದೆ ಎಂದು ‘ವೈಲ್ಸ್ ಹಾರ್ಡಿ’ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.