“ಈ ಬಾರಿಯ ಪರೀಕ್ಷೆಗಳಿಗೆ ಪಠ್ಯ ಕಡಿಮೆ ಮಾಡಲು ನಿರ್ಧಾರ” : ಸಚಿವ ಎಸ್.ಸುರೇಶ್ ಕುಮಾರ್…!

ಬೆಂಗಳೂರು,ಜನವರಿ,07,2021(www.justkannada.in) : ವಿಷಯ ತಜ್ಞರ ಅಭಿಪ್ರಾಯದಂತೆ ಬಾರಿಯ ಪರೀಕ್ಷೆಗಳಿಗಾಗಿ ಪಠ್ಯವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ತಜ್ಞರು ಮತ್ತು ಇಲಾಖಾ ಅಧಿಕಾರಿಗಳೊಂದಿಗೆ ಬಹಳ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.

jk-logo-justkannada-mysore

ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ತಿಳಿಸಲಾಗಿದೆ. ಕೇಂದ್ರದ ಸಿಬಿಎಸ್ಸಿ ತರಗತಿಗಳ ಪರೀಕ್ಷೆಗಳ ದಿನಾಂಕಗಳನ್ನೂ ಈಗಾಗಲೇ ಕೇಂದ್ರ ಶಿಕ್ಷಣ ಸಚಿವರು ಪ್ರಕಟಿಸಿದ್ದಾರೆ. ಅದನ್ನು ಗಮನಿಸಿದ ನಂತರ ಸಾಕಷ್ಟು ಅಧ್ಯಯನ ಮಾಡಿ ನಮ್ಮ ರಾಜ್ಯದ ಎರಡನೇ ಪಿಯುಸಿ ಪರೀಕ್ಷೆಗ ಮೇ ಎರಡನೇ ವಾರದಿಂದ ಪ್ರಾರಂಭ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಗಳು ಜೂನ್ ಮೊದಲವಾರದಲ್ಲಿ ಪ್ರಾರಂಭವಾಗುತ್ತವೆ ಎಂದು ಪ್ರಕಟಿಸಲಾಗಿದೆ ಎಂದಿದ್ದಾರೆ.

 

ನಾನು ಕಳೆದ ಎರಡು ತಿಂಗಳಿಂದ ಹೋದ ಎಲ್ಲಾ ಕಡೆಪರೀಕ್ಷೆ ಯಾವಾಗಎನ್ನುವ ಪ್ರಶ್ನೆಯನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೇಳುತ್ತಿದ್ದರು. ವಿದ್ಯಾರ್ಥಿಗಳಿಗೆಲ್ಲ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ. ವಿದ್ಯಾರ್ಥಿಗಳ ಮೇಲೆ ಯಾವುದೇ ಹೊರೆ ಬೀಳದಂತೆ ಒತ್ತಡ ಬೀರದಂತೆ ಪಠ್ಯ ನಿರ್ಧರಿಸಲಾಗುತ್ತದೆ. ಹಿನ್ನೆಲೆಯಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳು ಸಾಕಷ್ಟು ಸುತ್ತು ಚರ್ಚೆಗಳನ್ನು ಶಿಕ್ಷಕರೊಂದಿಗೆ, ತಜ್ಞರ ಜೊತೆಗೆ ನಡೆಸಿ ಈಗ ಎರಡನೇ ವಾರದಿಂದ ಎರಡನೇ ಪಿಯುಸಿ ಹಾಗೂ ಜೂನ್ ಮೊದಲನೇ ವಾರದಿಂದ ಎಸೆಸೆಲ್ಸಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಆಖ್ಯೆರು ಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

 

ಇನ್ನು ಪರೀಕ್ಷಾ ದೃಷ್ಟಿಯಿಂದ ನಿಗದಿ ಪಡಿಸಿರುವ ಪಠ್ಯದ ಬಗ್ಗೆ ಸಹ ಗಮನ ಹರಿಸಲಾಗಿದೆ. ಲಭ್ಯವಿರುವ ಸಮಯದಲ್ಲಿ ಸಮರ್ಪಕವಾಗಿ ಕಲಿಯುವಂತೆ ಇರಬೇಕು. ಎಸ್ ಎಸ್ ಎಲ್ ಸಿ ಮತ್ತು ಎರಡನೇ ಪಿಯುಸಿ ತರಗತಿಗಳಲ್ಲಿ ಅಗತ್ಯವಾಗಿ ಕಲಿಯಲೇಬೇಕಾದ ಸಂಗತಿಗಳನ್ನು ಬಿಡದಂತೆ ಎಚ್ಚರವಹಿಸಬೇಕು. ಮುಂದಿನ ತರಗತಿಗಳಿಗೆ ಹೋಗುವಾಗ ಅತ್ಯಂತ ಅಗತ್ಯವಿರುವ ಪಾಠಗಳ ಕಲಿಕೆ ಆಗಲೇಬೇಕು. ದೃಷ್ಟಿಯಿಂದ ವಿಷಯ ತಜ್ಞರು ಮತ್ತು ನಮ್ಮ ಇಲಾಖಾ ಅಧಿಕಾರಿಗಳು ಬಹಳ ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.

 tests,Less,than,text,Decision,Minister,S.Suresh Kumar

 

ಕೇಂದ್ರದಲ್ಲಿ ಮಾಡಿರುವಂತೆ ನಮ್ಮಲ್ಲಿಯೂ ಲಭ್ಯವಿರುವ ಸಮಯವನ್ನು ಮನದಲ್ಲಿಟ್ಟುಕೊಂಡು ಒಟ್ಟು ಪಠ್ಯದಲ್ಲಿ ಶೇ.30ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಆದರೆ, ಅಗತ್ಯ ಕಲಿಕೆ ಕುರಿತು ರಾಜಿ ಮಾಡಿಕೊಳ್ಳುವುದಿಲ್ಲ. ವಿವರಗಳನ್ನು ಸೋಮವಾರದ ಒಳಗೆ ಶಾಲೆಗಳಿಗೆ ಮುಟ್ಟಿಸಲಾಗುವುದು. ವಿದ್ಯಾರ್ಥಿಗಳು ಇನ್ನು ನಿರಾತಂಕವಾಗಿ ಓದಿನ ಕಡೆ ಗಮನ ಹರಿಸಬೇಕೆಂದು ನನ್ನ ಮನವಿ ಎಂದು ಸಚಿವ ಎಸ್​.ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

 

key words : tests-Less-than-text-Decision-Minister-S.Suresh Kumar …!